ವಿಟ್ಲ: ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ಪಾರ್ವತಿ(56) ಮೃತಪಟ್ಟ ಮಹಿಳೆ.
ಪಾರ್ವತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಈ ಹಿಂದೆ ಮಂಗಳೂರಿನ ಆಸ್ಪತ್ರೆಯಿಂದ ಔಷಧಿಯನ್ನು ಪಡೆದುಕೊಂಡು ಇತ್ತೀಚೆಗೆ 3 ದಿನಗಳ ಹಿಂದೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಆರೋಗ್ಯ ಸ್ಥಿತಿ ಸರಿ ಇಲ್ಲದ ಕಾರಣ ಸೆ. 20 ರಂದು ಒಬ್ಬರೇ ಮನೆಯಲ್ಲಿದ್ದು. ಮಧ್ಯಾಹ್ನ ಮನೆಯವರು ಬಂದು ನೋಡಿದಾಗ ಮನೆಯಲ್ಲಿ ಪಾರ್ವತಿಯವರು ಇಲ್ಲದೇ ಎಲ್ಲಾ ಕಡೆಗೆ ಹುಡುಕಾಡಿದಾಗ ತೋಟದ ಕೆರೆಯ ಬದಿಯಲ್ಲಿ ಚಪ್ಪಲಿ ಹಾಗೂ ಕನ್ನಡಕ ಕಂಡು ಬಂದಿದ್ದು,ಸಂಶಯದಿಂದ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.
ಪಾರ್ವತಿಯವರು ಮಾನಸಿಕ ಅಸ್ವಸ್ಥೆಯಾಗಿದ್ದು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಮಾನಸಿಕ ಖಿನ್ನತೆ ಗುಣವಾಗದೆ ಇದ್ದು ಅದೇ ವಿಷಯದಿಂದ ಮಾನಸಿಕವಾಗಿ ಮನನೊಂದು ಮನೆಯ ಬಳಿಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.