Tuesday, June 9, 2026
Homeಇತರಕಾಸರಗೋಡು: ಜ್ವರದಿಂದ 5 ವರ್ಷದ ಬಾಲಕ ಸಾವು...! ನಿಫಾದ ಲಕ್ಷಣಗಳು ಕಂಡು ಬಂದ...

ಕಾಸರಗೋಡು: ಜ್ವರದಿಂದ 5 ವರ್ಷದ ಬಾಲಕ ಸಾವು…! ನಿಫಾದ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಗಂಟಲ ದ್ರವ ತಪಾಸಣೆಗೆ ರವಾನೆ…!

- Advertisement -
- Advertisement -

ಕಾಸರಗೋಡು: ಚೆಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜ್ವರದಿಂದ ಸಾವಿಗೀಡಾದ 5 ವರ್ಷದ ಬಾಲಕನ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಿಫಾದ ಕೆಲವು ಲಕ್ಷಣಗಳು ಇದ್ದವು ಎಂಬ ಸಂಶಯದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಕಲ್ಲಿಕೋಟೆ ಹಾಗೂ ಪೂನಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಇನ್ನೆರಡು ದಿನಗಳಲ್ಲಿ ತಪಾಸಣ ವರದಿ ಲಭಿಸಲಿದೆ.

ಬಾಲಕನಿಗೆ ಕೊವೀಡ್ ಟೆಸ್ಟ್ ಮಾಡಲಾಗಿದ್ದು ನೆಗೆಟಿವ್ ವರದಿ ಬಂದಿದೆ. ಪರೀಕ್ಷಾ ವರದಿ ಲಬಿಸುವವರೆಗೆ ಚೆಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಸೇರುವ ಎಲ್ಲಾ ಗ್ರಾಮ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಕಾರ್ಯಕ್ರಮವನ್ನು ಕೂಡಾ ರದ್ದುಗೊಳಿಸಲಾಗಿದೆ ಎಂದು ಸಿಎಂಗಳ ಪಂಚಾಯಿತ ಆರೋಗ್ಯ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ.

- Advertisement -

Latest News

error: Content is protected !!