” ಧರ್ಮಸಂಸ್ಥಾಪನೆಗಾಗಿ ದುಷ್ಟರ ಮರ್ಧನ ಶಿಷ್ಟರ ಪರಿಪಾಲನೆಗಾಗಿ ದ್ವಾಪರಾಯುಗದಲ್ಲಿ ಅವತಾರವೆತ್ತಿದ ಶ್ರೀಕೃಷ್ಣ ಪರಮಾತ್ಮನಿಗೆ ದ್ವಾರಕಾ ನಗರವನ್ನು ನಿರ್ಮಿಸಿದವರು ವಿಶ್ವಗುರು ವಿಶ್ವಕರ್ಮ. ಅವರು ದ್ವಾರಕಾ ನಗರವನ್ನು ನಿರ್ಮಿಸಿಕೊಟ್ಟ ಪುಣ್ಯ ದಿನವನ್ನು ವಿಶ್ವಕರ್ಮ ದಿನವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ” ಎಂದು ಎಸ್.ವಿ.ಎಸ್. ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀ ಮುರಳೀಧರ ಆಚಾರ್ಯರು ಹೇಳಿದರು.


ಬಂಟ್ವಾಳ ಬಿಜೆಪಿ ಓಬಿಸಿ ಮೋರ್ಚಾ ಏರ್ಪಡಿಸಿದ ವಿಶ್ವಕರ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಶ್ರೀ ಆನಂದ ಶಂಭೂರು ವಹಿಸಿಕೊಂಡಿದ್ದರು. ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಚಿದಾನಂದ ರೈ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಓಬಿಸಿ ಮೋರ್ಚಾದ ಮಂಡಲ ಪ್ರಭಾರಿ ಪ್ರಕಾಶ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ರಮಾನಾಥ ರಾಯಿ ಜಿಲ್ಲಾ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಪುರುಷೋತ್ತಮ, ಬಂಟ್ವಾಳ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಗೋಪಾಲ, ಕಾರ್ಯದರ್ಶಿ ಚಿದಾನಂದ, ಪ್ರಮುಖರಾದ ಜಯಪ್ರಕಾಶ್ ಆಚಾರ್ಯ ಭಂಡಾರಿಬೆಟ್ಟು, ಹರೀಶ್ ಆಚಾರ್ಯ ರಾಯಿ, ಲಕ್ಷ್ಮಿ ಗೋಪಾಲಾಚಾರ್ಯ ಬಾಳ್ತಿಲ, ವಾಮನ ಆಚಾರ್ಯ ಅಮ್ಮುಂಜೆ, ಮುಂತಾದವರು ಭಾಗವಹಿಸಿದ್ದರು. ಮಂಡಲ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ ಸ್ವಾಗತಿಸಿ, ಕಾರ್ಯದರ್ಶಿ ಮೋಹನದಾಸ್ ಕೊಠಾರಿ ವಂದಿಸಿದರು. ರಮೇಶ್ ಪುರೋಹಿತರು ಪ್ರಾರ್ಥನಾ ಶ್ಲೋಕ ಹೇಳಿದರು.


