Sunday, June 7, 2026
Homeಇತರಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಕಳವು...!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಕಳವು…!

- Advertisement -
- Advertisement -

ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮಾಧುರಿ ಮಾಧವ ಪುರಾಣಿಕ್‌ ಎಂಬುವವರ ಲ್ಯಾಪ್‌ಟಾಪ್‌ ಕಳವಾಗಿದೆ.

ಶಿರಸಿಗೆ ತೆರಳುತ್ತಿದ್ದ ಮಾಧುರಿ ಲ್ಯಾಪ್‌ಟಾಪ್ ಅನ್ನು ಬಸ್‌ನ ಸೀಟಿನ ಮೇಲಿಟ್ಟು ಉಡುಪಿಯ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಬಳಿಕ ಬಂದು ನೋಡುವಾಗ ಲ್ಯಾಪ್‌ಟಾಪ್ ಕಳುವಾಗಿತ್ತು. ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿದ್ದ ಆಧಾರ್‌ ಕಾರ್ಡ್‌, ಮತದಾರ ಗುರುತಿನ ಕಾರ್ಡ್‌, ಗ್ರಂಥಾಲಯ ಕಾರ್ಡ್‌, ಎಟಿಎಂ ಕಾರ್ಡ್‌, ಟಿಸಿ, ಪವರ್‌ ಬ್ಯಾಂಕ್‌, ಚಾಲನಾ ಪರವಾನಗಿ ಸೇರಿದಂತೆ ಹಲವು ವಸ್ತುಗಳು ಕಳುವಾಗಿವೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!