Monday, June 8, 2026
Homeಅಪರಾಧಬೆಳ್ತಂಗಡಿ: ತಲೆಗೆ ಬಲವಾಗಿ ಹೊಡೆದು ಸಂಬಂಧಿಯಿಂದಲೇ ಕೊಲೆ; ಆರೋಪಿ ಪರಾರಿ!

ಬೆಳ್ತಂಗಡಿ: ತಲೆಗೆ ಬಲವಾಗಿ ಹೊಡೆದು ಸಂಬಂಧಿಯಿಂದಲೇ ಕೊಲೆ; ಆರೋಪಿ ಪರಾರಿ!

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಪಾಂಡವರಕಲ್ಲು ನಿವಾಸಿ ರಫೀಕ್ ಎಂಬವರನ್ನು ಸಂಬಂಧಿಯೇ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಸೋಮವಾರ ನಡೆದಿದೆ.

ಸ್ವಂತ ಅತ್ತೆ ಮಗನಾದ ಸಿದ್ದೀಕ್ ಎಂಬವನೇ ಕೃತ್ಯ ನಡೆಸಿದ್ದೆಂದು ತಿಳಿದು ಬಂದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕೊಲೆ ನಡೆದಿದ್ದು,ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ಕೋಡ್ಯಮಲೆ ಎಂಬಲ್ಲಿ ರಸ್ತೆ ಬದಿ ಪತ್ತೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿದೆ ಎಂದು ಅರಂಭಿಕ ಮಾಹಿತಿ ಲಭಿಸಿದ್ದು, ಮರದ ತುಂಡಿನಿಂದ ತಲೆಗೆ ಹೊಡೆದು ಸಾಯಿಸಿದಂತೆ ಕಾಣುತ್ತಿದೆ.

ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ ಶರ್ಟ್ ಧರಿಸಿರುವ ರಫೀಕ್ ಮೃತದೇಹ ಮಲಗಿದ ಸ್ಥಿತಿಯಲ್ಲಿ ಕಾಡಿನ ಬದಿ ಪತ್ತೆಯಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಎಸ್ ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ‌ ಮಾಡಿದ ಆರೋಪಿ ಸಿದ್ದೀಕ್ ಪರಾರಿಯಾಗಿದ್ದಾನೆ.

- Advertisement -

Latest News

error: Content is protected !!