Thursday, June 4, 2026
Homeಇತರಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಲಾರಿ ಪಲ್ಟಿ...! ಲಕ್ಷಾಂತರ ರೂ. ನಷ್ಟ...!

ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಲಾರಿ ಪಲ್ಟಿ…! ಲಕ್ಷಾಂತರ ರೂ. ನಷ್ಟ…!

- Advertisement -
- Advertisement -

ಉಡುಪಿ : ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೇ ಪಲ್ಟಿಯಾದ ಘಟನೆ ಸೆ.12ರಂದು ಕಾರ್ಕಳ ತಾಲೂಕಿನ ಹೀರ್ಗಾನ ಗ್ರಾಮದ ಮೂಜೂರು ಬಳಿ ಸಂಭವಿಸಿದೆ.

ಶಿವಮೊಗ್ಗ, ಕಡೆಯಿಂದ ಮಂಗಳೂರು ಕಡೆಗೆ ಕೋಳಿಗಳನ್ನು ಹೇರಿಕೊಂಡು ಕಾರ್ಕಳ ಮಾರ್ಗವಾಗಿ ಸಾಗುತ್ತಿದ್ದಾಗ ಹಿರ್ಗಾನ ಗ್ರಾಮದ ಮೂರುರು ಅಂಚೆಕಚೇರಿಯ ಬಳಿ ನಡು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ಘಟನೆಯಿಂದ ಲಾರಿ ಚಾಲಕ ಗಾಯಗೊಂಡಿದ್ದು, ಸಾವಿರಾರು ಕೋಳಿಗಳು ಸಾವನ್ನಪ್ಪಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬೆಳ್ಳಂಬೆಳಗೆ, ಕೋಳಿ ಸಾಗಾಟದ ಲಾರಿ ಪಲ್ಟಿಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಜನರು ನಾ ಮುಂದು ತಾ ಮುಂದು ಎಂಬಂತೆ ಧಾವಿಸಿ ಸತ್ತು ಬಿದ್ದಿರುವ ಕೋಳಿಗಳನ್ನು ಕೈಗೆಸಿಕ್ಕಷ್ಟು ಬಾಚಿಕೊಂಡಿದ್ದಾರೆ. ಕೆಲವರು ಗೋಣಿಚೀಲಗಳಲ್ಲಿ ತುಂಬಿಸಿಕೊಳ್ಳುವ ತರಾತುರಿಯಲ್ಲಿದ್ದರು. ಅಪಘಾತದಲ್ಲಿ ಕೋಳಿ ಫಾರ್ಮ್ ಮಾಲೀಕ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರೆ.

- Advertisement -

Latest News

error: Content is protected !!