Thursday, June 4, 2026
Homeಅಪರಾಧಬಂಟ್ವಾಳ: ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯಸರ ಎಗರಿಸಿ ಪರಾರಿಯಾದ ಕಳ್ಳರು!

ಬಂಟ್ವಾಳ: ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯಸರ ಎಗರಿಸಿ ಪರಾರಿಯಾದ ಕಳ್ಳರು!

- Advertisement -
- Advertisement -

ಬಂಟ್ವಾಳ: ವಿಳಾಸ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮಹಿಳೆಯನ್ನು ಮಾತಿಗೆಳೆದು ಬಳಿಕ ಮಾಂಗಲ್ಯ ಸರ ಅಪಹರಿಸಿದ ಘಟನೆ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ನಡೆದಿದೆ.

ಬೈಕ್ ನಲ್ಲಿ ಬಂದ ಇಬ್ಬರು ಮಹಿಳೆಯ ಬಳಿ ದಾರಿ ಕೇಳಿದ್ದು, ಬಳಿಕ ಮಹಿಳೆ ವಿಳಾಸ ಹೇಳುವ ಸಂದರ್ಭದಲ್ಲಿ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾರೆ. ಮಾರ್ನಬೈಲು ಬೊಳ್ಳಾಯಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ನಾರಾಯಣ ಎಂಬವರ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯವೆಸಗಿದ್ದು, ಸುಮಾರು 12 ಗ್ರಾಂ ತೂಕದ ಕರಿಮಣಿ ಸರ ಕದ್ದೊಯ್ದಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!