Thursday, June 4, 2026
Homeಕರಾವಳಿಅಫ್ಗಾನ್ ನಿಂದ ಮಂಗಳೂರಿಗೆ ವಾಪಸ್ಸಾಗುವವರಿದ್ದರೆ ಅವರ ನೆರವಿಗೆ ಕ್ರಮ; ಕಮಿಷನರ್ ಎನ್.ಶಶಿಕುಮಾರ್

ಅಫ್ಗಾನ್ ನಿಂದ ಮಂಗಳೂರಿಗೆ ವಾಪಸ್ಸಾಗುವವರಿದ್ದರೆ ಅವರ ನೆರವಿಗೆ ಕ್ರಮ; ಕಮಿಷನರ್ ಎನ್.ಶಶಿಕುಮಾರ್

- Advertisement -
- Advertisement -

ಮಂಗಳೂರು: ಅಫ್ಗಾನಿಸ್ತಾನದಿಂದ ಯಾರಾದರೂ ಬರುವವರಿದ್ದಾರೆ ಅವರ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಿ ಅವರನ್ನು ವಾಪಸ್ ಕರೆಸಿಕೊಳ್ಳುವ ಕ್ರಮವನ್ನು ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆಶ್ವಾಸನೆ ನೀಡಿದ್ದಾರೆ.

ಕಾಬೂಲ್‌ನಿಂದ ಏರ್‌ಲಿಫ್ಟ್ ಆಗಿ ಬಂದಿರುವ ಏಳು ಮಂದಿ ಮಂಗಳೂರಿಗರ ಜತೆ ತಮ್ಮ ಕಚೇರಿಯಲ್ಲಿ ಅವರ ಕುಶೋಲಪರಿ ನಡೆಸಿದರು.

ಪ್ರಸಾದ್ ಆನಂದ್, ದಿನೇಶ್ ರೈ, ಶ್ರವಣ್ ಅಂಚನ್, ಜಗದೀಶ್ ಪೂಜಾರಿ, ಡೆಸ್ಮಂಡ್ ಡೇವಿಡ್ ಡಿಸೋಜ, ಡೆನ್ಸಿಲ್ ಮೊಂತೆರೋ, ಮೆಲ್ವಿನ್ ಮೊಂತೆರೋ ಇವರೆಲ್ಲರೂ ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಕಾಬೂಲ್‌ನಿಂದ ಆ.17ರಿಂದ ದಿಲ್ಲಿಗೆ ಕರೆತಂದು ಬಳಿಕ ಆ.23 ಮತ್ತು 24ರಂದು ಅವರೆಲ್ಲಾ ಮಂಗಳೂರಿಗೆ ಆಗಮಿಸಿದ್ದಾರೆ.

ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿಯನ್ನು ಕಾಬೂಲ್‌ನಿಂದ ಆ.17ರಂದು ದೆಹಲಿಗೆ ಕರೆತಂದು ನಂತರ ಆ.23 ಹಾಗೂ 24ರಂದು ಎಲ್ಲರೂ ಮಂಗಳೂರಿಗೆ ಆಗಮಿಸಿದ್ದಾರೆ.ಕೇಂದ್ರ ಸರ್ಕಾರವು ಅಫ್ಗಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದ್ದು, ಈ ಕುರಿತು ಎಲ್ಲರಿಗೂ ವಿಶ್ವಾಸವಿದೆ. ಒಂದು ವೇಳೆ ಇನ್ನೂ ಯಾರಾದರೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿರುವ ಮಂಗಳೂರಿಗರು ಇದ್ದಲ್ಲಿ ಮಾಹಿತಿ ನೀಡಿದರೆ, ರಾಜ್ಯದ ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಮಾಹಿತಿಯನ್ನು ಒದಗಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.

ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.

- Advertisement -

Latest News

error: Content is protected !!