Saturday, July 5, 2025
Homeಅಪರಾಧಉಡುಪಿ:ಸಿಗರೇಟ್ ಕೇಳುವ ನೆಪದಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನವನ್ನು ಎಗರಿಸಿದ ಖದೀಮ!

ಉಡುಪಿ:ಸಿಗರೇಟ್ ಕೇಳುವ ನೆಪದಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನವನ್ನು ಎಗರಿಸಿದ ಖದೀಮ!

spot_img
- Advertisement -
- Advertisement -

ಉಡುಪಿ: ಉಡುಪಿಯ ಗುಂಡುಪಾದೆ ಪೆರ್ಣಂಕಿಲ ಗ್ರಾಮದಲ್ಲಿರುವ ಕಲ್ಯಾಣಿ ಜನರಲ್ ಸ್ಟೋರ್‌ನಲ್ಲಿ ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ನಡೆದಿದೆ.

ಕಲ್ಯಾಣಿ ಜನರಲ್ ಸ್ಟೋರ್ ಎಂಬ ದಿನಸಿ ಅಂಗಡಿ ರಾಮಣ್ಣ ಜಿ, ನಾಯಕ್‌ ಎಂಬುವವರಿಗೆ ಸೇರಿದ್ದು ಗ್ರಾಹಕರಂತೆ ಬಂದು ಸಿಗರೇಟ್‌ ನೀಡುವಂತೆ ಕೇಳಿಕೊಂಡಿದ್ದಾನೆ. ಸಿಗರೇಟ್ ನೀಡುವಾಗ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 2 ರಿಂದ 16 ಗ್ರಾಮ್‌ ತೂಕದ ಚಿನ್ನದ ಸರವನ್ನು ಎಗರಿಸಿದ್ದಾನೆ.

ಇನ್ನು ಕುತ್ತಿಗೆಯಿಂದ ಸರವನ್ನು ಎಳೆದುಕೊಂಡು ಓಡಿ ಹೋಗಿ ಅಂಗಡಿಯ ಮುಂಭಾಗ ಸ್ವಲ್ಪ ದೂರದಲ್ಲಿ ಇನ್ನೊರ್ವ ವ್ಯಕ್ತಿ ಚಾಲನಾ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದ ಮೋಟಾರ್‌ ಸೈಕಲ್‌ನಲ್ಲಿ ಕುಳಿತುಕೊಂಡು ಅತಿವೇಗವಾಗಿ ಮರ್ಣೆ ಅಲೆವೂರು ಕಡೆ ಹೋಗಿದ್ದು, ಬೈಕ್ ಗೆ ಹಿಂಬದಿಯಲ್ಲಿ ನಂಬರ್‌ಪ್ಲೇಟ್‌ ಇರಲಿಲ್ಲ ಎಂದು ರಾಮಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಿರಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!