Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸುಲ್ಕೇರಿಯ ಯುವಕ ನೇಣುಬಿಗಿದು ಆತ್ಮಹ*ತ್ಯೆ

ಬೆಳ್ತಂಗಡಿ : ಸುಲ್ಕೇರಿಯ ಯುವಕ ನೇಣುಬಿಗಿದು ಆತ್ಮಹ*ತ್ಯೆ

- Advertisement -
- Advertisement -

ಬೆಳ್ತಂಗಡಿ : ಸುಲ್ಕೇರಿ ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೇರಿಯಲ್ಲಿ ಕಳೆದ ರಾತ್ರಿ ಜು. 4ರಂದು ನಡೆದಿದೆ. ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25ವ) ಎಂದು ಗುರುತಿಸಲಾಗಿದೆ.

ಕಿಶೋರ್ ಅವರು ಗಾರೆ ಕೆಲಸ, ಮದ್ದು ಸಿಂಪಡಿಸುವ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಕಳೆದ ಒಂದು ವಾರದಿಂದ ಮಂಕಾಗಿದ್ದು, ಯಾರಲ್ಲಿಯೂ ಹೆಚ್ಚು ಬೆರೆಯುತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದು, ಸಂಜೆಯವರೆಗೆ ಮನೆಗೆ ಬಾರದೆ ಇದ್ದಾಗ ಸ್ಥಳಿಯರು ಸೇರಿ ಹುಡುಕಲು ಪ್ರಾರಂಭಿಸಿದ್ದಾರೆ. ರಾತ್ರಿ ಸುಮಾರು 11 ಗಂಟೆಗೆ ನೇಣು ಬಿಗಿದುಕೊಂಡ ರೀತಿಯಲ್ಲಿ ಕಿಶೋರು ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಸ್ಥಳಕ್ಕೆ ವೇಣೂರು ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಸಹೋದರ ಕೀರ್ತನ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!