Sunday, June 7, 2026
Homeತಾಜಾ ಸುದ್ದಿಬೆಂಗಳೂರು ಬಾಯ್ಲರ್ ಸ್ಪೋಟ ಪ್ರಕರಣ: ಮೃತರ ಸಂಖ್ಯೆ 4 ಕ್ಕೆ ಏರಿಕೆ

ಬೆಂಗಳೂರು ಬಾಯ್ಲರ್ ಸ್ಪೋಟ ಪ್ರಕರಣ: ಮೃತರ ಸಂಖ್ಯೆ 4 ಕ್ಕೆ ಏರಿಕೆ

- Advertisement -
- Advertisement -

ಬೆಂಗಳೂರು: ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ.

ಗಾಯಾಳುಗಳಾದ ಧನಲಕ್ಷ್ಮಿ(50) ಮತ್ತು ಸಚಿನ್(40) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದ ಐದನೇ ಅಡ್ಡರಸ್ತೆಯಲ್ಲಿ ಖಾದ್ಯ ತಯಾರಿಕೆ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಬಿಹಾರ ಮೂಲದ ಮನೀಶ್ ಕುಮಾರ್ ಮತ್ತು ಸೌರವ್ ಸಜೀವ ದಹನವಾಗಿದ್ದರು.

ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಲೀಕ ಸಚಿನ್ ಹಾಗೂ ಧನಲಕ್ಷ್ಮಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!