Monday, June 8, 2026
Homeಕರಾವಳಿಬೆಳ್ತಂಗಡಿ ತಾಲೂಕು ಗ್ರೇಡ್ -2 ಪ್ರಭಾರ ತಹಶೀಲ್ದಾರ್ ಆಗಿ ಐಎಎಸ್ ತರಬೇತಿ ಅಧಿಕಾರಿ ನೇಮಕ

ಬೆಳ್ತಂಗಡಿ ತಾಲೂಕು ಗ್ರೇಡ್ -2 ಪ್ರಭಾರ ತಹಶೀಲ್ದಾರ್ ಆಗಿ ಐಎಎಸ್ ತರಬೇತಿ ಅಧಿಕಾರಿ ನೇಮಕ

- Advertisement -
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಗೆ ಪರೀಕ್ಷಾರ್ಥ ಐಎಎಸ್ ಪ್ರೊಬೇಷನರ್ 2020 ನೇ ಬ್ಯಾಚ್ ನ ಅಧಿಕಾರಿಯಾಗಿರುವ ಪ್ರಸ್ತುತ ಮಣಿಪುರಿ ನಿವಾಸಿ ಶ್ರೀ ನೊಂಗ್ಜೈ ಮಹಮ್ಮದ್ ಆಲಿ ಅಕ್ರಂ ಷಾ(22) ಅವರನ್ನು ತಕ್ಷಣದಿಂದ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ಪ್ರಭಾರದಲ್ಲಿ ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಮಹಮ್ಮದ್ ಆಲಿ ಅಕ್ರಂ ಷಾ ಇಂದು ಬೆಳ್ತಂಗಡಿ ತಾಲೂಕು ಕಛೇರಿಗೆ ಆಗಮಿಸಿ ಅಧಿಕಾರ ವಹಿಸಿದರು. ಒಂದು ತಿಂಗಳ ತರಬೇತಿಯನ್ನು ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ನಿರ್ವಹಿಸಲಿದ್ದಾರೆ. ಮಣಿಪುರಿ ನಿವಾಸಿಯಾಗಿರುವ ಇವರಿಗೆ ಹಿಂದಿ ,ಇಂಗ್ಲೀಷ್ ಮಾತ್ರ ಮಾತನಾಡುತ್ತಾರೆ.

- Advertisement -

Latest News

error: Content is protected !!