Sunday, June 7, 2026
Homeಕರಾವಳಿಉಡುಪಿಸಿಎಂ ಪರಿಹಾರ ನಿಧಿಗೆ ಪಡುಕುತ್ಯಾರು ಕಾಳ ಹಸ್ತೇಂದ್ರ ಸ್ವಾಮೀಜಿಯಿಂದ ನೆರವಿನ ಚೆಕ್ ಸಲ್ಲಿಕೆ

ಸಿಎಂ ಪರಿಹಾರ ನಿಧಿಗೆ ಪಡುಕುತ್ಯಾರು ಕಾಳ ಹಸ್ತೇಂದ್ರ ಸ್ವಾಮೀಜಿಯಿಂದ ನೆರವಿನ ಚೆಕ್ ಸಲ್ಲಿಕೆ

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಅನಂತ ವಿಭೂಷಿತ ಕಾಳಹಸ್ತೆಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಗೆ ಸ್ವಾಮೀಜಿ ಒಂದು ಲಕ್ಷದ ಇಪ್ಪತ್ತಮೂರು ಸಾವಿರದ ನಾನೂರ ಐವತ್ತಾರು ರೂಪಾಯಿ ನೆರವು ನೀಡಿದ್ದಾರೆ. ನೆರವಿನ ಚೆಕ್ ಅನ್ನು ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಲಾಗಿದೆ.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಚೆಕ್ ಅನ್ನು ಸಿಎಂಗೆ ಹಸ್ತಾಂತರಿಸಿದರು.

ಚೆಕ್ ಸಿಎಂ ಪರಿಹಾರ ನಿಧಿಗೆ ತಲುಪಿಸುವಂತೆ ಸ್ವಾಮೀಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ್ದರು.

- Advertisement -

Latest News

error: Content is protected !!