Thursday, June 4, 2026
Homeಅಪರಾಧಬೈಂದೂರು: ಅಕ್ರಮ ಗೋ ಸಾಗಾಟ, ಆರೋಪಿ ವಶಕ್ಕೆ

ಬೈಂದೂರು: ಅಕ್ರಮ ಗೋ ಸಾಗಾಟ, ಆರೋಪಿ ವಶಕ್ಕೆ

- Advertisement -
- Advertisement -

ಉಡುಪಿ: ಬೈಂದೂರಿನಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣ ಪತ್ತೆಯಾಗಿದೆ. ಪೊಲೀಸರು ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.‌ ಆರು ಗೋವು, ಒಂದು ಪಿಕಪ್ ವಾಹನ, ಮತ್ತು ಓರ್ವ ಆರೋಪಿ ಬಂಧನ ನಡೆದಿದೆ.

ಕುಂದಾಪುರದಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಗೋವು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯೊಂದಿಗೆ ಬೈಂದೂರಿನಿಂದ ಗೋ ಸಾಗಾಟ ಮಾಡಲಾಗುತ್ತಿದ್ದ ವಾಹನವನ್ನು ಹಿಂಬಾಲಿಸಿದ ಪೋಲಿಸರು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಗೋವು ಸಾಗಾಟ ನಿರತ ಆರೋಪಿ ಶಬ್ಬೀರ್( 35 ) ಪೋಲಿಸ್ ವಶಕ್ಕೆ ಪಡೆಯಲಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು ಪೋಲಿಸರ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಪವನ್ ನಾಯಕ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!