- Advertisement -
![]()
- Advertisement -
ಬಂಟ್ವಾಳ: ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆಯಲ್ಲಿ ಅತ್ತಿಗೆಯ ಜತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪದಿಂದ ತಮ್ಮನನ್ನು ಕೊಂದ ಅಣ್ಣ ರವಿ ನಾಯ್ಕ್ ನನ್ನು ಬಂಟ್ವಾಳ ನಗರ ಪೊಲೀಸರು ಬೊಂಡಾಲದಲ್ಲಿ ಬಂಧಿಸಿದ್ದಾರೆ.
ಶಾಂತಿಗುಡ್ಡೆಯ ನಿವಾಸಿ ರವಿ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆಯಾದ ಸುಂದರನು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ಆತನಿಗೆ ರವಿಯ ಪತ್ನಿ ಊಟ- ತಿಂಡಿ ನೀಡುತ್ತಿದ್ದರು. ಸುಂದರ ಹಾಗೂ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಅಣ್ಣ- ತಮ್ಮನಿಗೆ ಪದೇ ಪದೇ ಜಗಳವಾಗುತ್ತಿತ್ತು. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ಜೋರಾಗಿದ್ದು, ಸುಂದರ ಬೊಬ್ಬೆ ಹೊಡೆಯುವುದನ್ನು ಕೇಳಿ ಮತ್ತೋರ್ವ ಅಣ್ಣ ರಮೇಶ ಅವರು ಹೋಗಿ ನೋಡಿದಾಗ, ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಂಧಿತ ಆರೋಪಿಗೆ ನ್ಯಾಯಾಲಯ ಬಂಧನ ವಿಧಿಸಲಾಗಿದೆ.
- Advertisement -


