Sunday, June 29, 2025
Homeಕರಾವಳಿಉಡುಪಿಉಡುಪಿ: ಫೇಸ್ ಬುಕ್ ಪರಿಚಯ ; ಫಾರ್ಮಸಿ ತೆರೆಯುವುದಾಗಿ ನಂಬಿಸಿ 19 ಲ.ರೂ. ವಂಚನೆ !

ಉಡುಪಿ: ಫೇಸ್ ಬುಕ್ ಪರಿಚಯ ; ಫಾರ್ಮಸಿ ತೆರೆಯುವುದಾಗಿ ನಂಬಿಸಿ 19 ಲ.ರೂ. ವಂಚನೆ !

spot_img
- Advertisement -
- Advertisement -

ಉಡುಪಿ : ಫೇಸ್ ಬುಕ್ ಮೂಲಕ ಪರಿಚಯವಾದ ವ್ಯಕ್ತಿಗೆ ಮಹಿಳೆಯೊಬ್ಬರು 19 ಲ.ರೂ. ನೀಡಿ ಮೋಸ ಹೋದ ಪ್ರಕರಣ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದೆ.

ಲಿನೆಟ್ ಸಿಮಾ ರೊಡ್ರಿಗಸ್‌ (38) ವಂಚನೆಗೊಳಗಾದ ಮಹಿಳೆ.ಈಕೆ ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದು, ಫೇಸ್ ಬುಕ್ ಮೂಲಕ ಆರೋಪಿ ಡಾ| ಆಯಂಡ್ರಿವ್‌ ಫೆಲಿಕ್ಸ್‌ ಎಂಬುವವರ ಪರಿಚಯವಾಗಿದ್ದು,ಆರೋಪಿಯು ವೃತ್ತಿಯಲ್ಲಿ ವೈದ್ಯ ಎಂಬುದಾಗಿ ತಿಳಿಸಿದ್ದಾನೆ.

ಜೊತೆಗೆ ದೆಹಲಿಯಲ್ಲಿ ಒಂದು ಫಾರ್ಮಸಿ ತೆರೆಯುವುದಾಗಿ ನಂಬಿಸಿ , ವಾಟ್ಸಪ್‌ ನಲ್ಲಿ ಸಂಪರ್ಕ ಹೊಂದಿ️, ಹಂತ ಹಂತವಾಗಿ 19 ಲ.ರೂ. ಮೊತ್ತವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದ್ದಾನೆ. ಸದ್ಯ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!