Friday, June 5, 2026
Homeಕರಾವಳಿಬೆಳ್ತಂಗಡಿ :ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ 'ವೃಕ್ಷ ಯಜ್ಞ' ಕಾರ್ಯಕ್ರಮಕ್ಕೆ ಚಾಲನೆ!

ಬೆಳ್ತಂಗಡಿ :ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ‘ವೃಕ್ಷ ಯಜ್ಞ’ ಕಾರ್ಯಕ್ರಮಕ್ಕೆ ಚಾಲನೆ!

- Advertisement -
- Advertisement -

ಬೆಳ್ತಂಗಡಿ:ನರಸಿಂಹಗಡ ತಪ್ಪಲಿನ ಕೊಡೆಲು ಪ್ರದೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ‘ವೃಕ್ಷ ಯಜ್ಞ’ ಹಣ್ಣಿನ ಗಿಡ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಇವರ ವತಿಯಿಂದ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಲಾಯಿಲ ಇದರ ಸಹಯೋಗದೊಂದಿಗೆ ನರಸಿಂಹಗಢದ ತಪ್ಪಲಲ್ಲಿ ನಡೆದ “ವೃಕ್ಷ ಯಜ್ಞ” ಹಣ್ಣಿನ ಗಿಡ ನೆಡುವ ಬೃಹತ್ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ, ವಿಧಾನ ಪರಿಷತ್ ನ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರು, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರಾದ ಲಕ್ಷ್ಮಿ ಮೋಹನ್ ಕುಮಾರ್ ಮತ್ತು ರಾಜೇಶ್ ಪ್ರಭು, ರೋಟರಿ ಸಂಸ್ಥೆ ಯ ಮುಖ್ಯಸ್ಥರು ಗಳಾದ ಶ್ರೀ ಶರತ್ ಕೃಷ್ಣ ಪಡುವೆಟ್ನಾಯ, ಬಿ ಕೆ ಧನಂಜಯ ರಾವ್,ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!