Sunday, May 5, 2024
Homeಕರಾವಳಿಕೇರಳ ಗಡಿಯಲ್ಲಿ ಬಿಗಿ ಕ್ರಮ ಹಿನ್ನೆಲೆ: ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಮಂಗಳೂರು ವಿವಿ

ಕೇರಳ ಗಡಿಯಲ್ಲಿ ಬಿಗಿ ಕ್ರಮ ಹಿನ್ನೆಲೆ: ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಮಂಗಳೂರು ವಿವಿ

spot_img
- Advertisement -
- Advertisement -

ಮಂಗಳೂರು: ಕೋವಿಡ್ ಕಾರಣಕ್ಕಾಗಿ ಕೇರಳ ರಾಜ್ಯ ಮತ್ತು‌ ದಕ್ಷಿಣ ಕನ್ನಡ ಜಿಲ್ಲಾ ಗಡಿಯಲ್ಲಿ‌ ಹೈ ಅಲರ್ಟ್ ನಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ಆಗಿರುವ ತೊಂದರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಸ್ಪಂದಿಸಿದೆ. ಗಡಿಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿರುವ ಮಂಗಳೂರು ವಿವಿ ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲು ಮುಂದಾಗಿದೆ.

ವಿಶೇಷ ದಿನದಂದು ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ‌ನಿರ್ಧಾರ ಮಾಡಿದ್ದು, ಗಡಿ ಮತ್ತು ಕೋವಿಡ್ ಸಮಸ್ಯೆಯಿಂದ ಪರೀಕ್ಷೆಗೆ ಗೈರಾದವರಿಗೆ ವಿಶೇಷ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿ ವಿವಿ ಪರೀಕ್ಷಾ ವಿಭಾಗ ವಿಶೇಷ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ.

ಕೇರಳದಲ್ಲಿ ಕೋವಿಡ್ ಸೋಂಕು ‌ಜಾಸ್ತಿಯಾದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಜಿಲ್ಲೆ ಪ್ರವೇಶಿಸಲು ನಿನ್ನೆಯಷ್ಟೇ ಬಿಗಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿತ್ತು. ಇದರಿಂದ ಗಡಿಯಲ್ಲಿರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು.

- Advertisement -
spot_img

Latest News

error: Content is protected !!