Sunday, June 7, 2026
Homeಕರಾವಳಿಉಡುಪಿಉಡುಪಿಯಲ್ಲಿ ತಡರಾತ್ರಿ ಫಿನಾನ್ಶಿಯರ್ ಬರ್ಬರ ಹತ್ಯೆ: ಕೊಲೆ‌ ಮಾಡಿ ಪರಾರಿಯಾದ ದುಷ್ಕರ್ಮಿಗಳು‌

ಉಡುಪಿಯಲ್ಲಿ ತಡರಾತ್ರಿ ಫಿನಾನ್ಶಿಯರ್ ಬರ್ಬರ ಹತ್ಯೆ: ಕೊಲೆ‌ ಮಾಡಿ ಪರಾರಿಯಾದ ದುಷ್ಕರ್ಮಿಗಳು‌

- Advertisement -
- Advertisement -

ಉಡುಪಿ: ಫಿನಾನ್ಶಿಯರ್ ನನ್ನು ತಡರಾತ್ರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಲ್ವಾಡಿ ಎಂಬಲ್ಲಿ ನಡೆದಿದೆ.

ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಅಜೇಂದ್ರ ಶೆಟ್ಟಿ (33) ಕೊಲೆಯಾದ ಫೈನಾನ್ಸ್ ಮಾಲೀಕ.

ಕುಂದಾಪುರದ ತಾಲೂಕಿನ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಳ್ವಾಡಿಯಲ್ಲಿ ತಡರಾತ್ರಿ ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಕೊಲೆಯಾಗಿದೆ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿರುವ ಅಜೇಂದ್ರ ಶೆಟ್ಟಿ ತಡರಾತ್ರಿಯವರೆಗೆ ಮನೆಗೆ ವಾಪಾಸ್ಸಾಗಿರಲಿಲ್ಲ. ಹೀಗಾಗಿ ಮನೆಯವರು ಹುಡುಕಾಟ ಪ್ರಾರಂಭಿಸಿದ್ದಾರೆ. ಎಲ್ಲೂ ಕೂಡ ಕಾಣಿಸದಿದ್ದಾಗ ಆತನ ಸ್ನೇಹಿತರು ಫೈನಾನ್ಸ್ ಗೆ ಹೋಗಿದ್ದಾರೆ. ಫೈನಾನ್ಸ್ ಒಳಗೆ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ ಎಂಬ ಮಾಹಿತಿಯಿದೆ.

ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಅಜೇಂದ್ರ ಫೈನಾನ್ಸ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ವ್ಯವಹಾರ ವಿಚಾರದಲ್ಲಿ ನಡೆದಿರುವ ಕೊಲೆಯೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಕೊಲೆಯ ಹಿಂದಿನ ಕಾರಣ ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬರಬೇಕಾಗಿದೆ. ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!