Saturday, June 6, 2026
Homeಕರಾವಳಿಮಾಸ್ಕ್ ಧರಿಸಿದೇ ಓಡಾಡಿದ ಸಾರ್ವಜನಿಕರಿಂದ ಇದುವರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 1 ಕೋಟಿ ರೂ ದಂಡ...

ಮಾಸ್ಕ್ ಧರಿಸಿದೇ ಓಡಾಡಿದ ಸಾರ್ವಜನಿಕರಿಂದ ಇದುವರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 1 ಕೋಟಿ ರೂ ದಂಡ ವಸೂಲಿ

- Advertisement -
- Advertisement -

ಮಂಗಳೂರು: ಜಿಲ್ಲೆಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಂದ ದಕ್ಷಿಣಕನ್ನಡ ಜಿಲ್ಲಾಡಳಿತ ಈವರೆಗೆ ಒಂದು ಕೋಟಿ ರೂ. ಗೂ ಅಧಿಕ ದಂಡ ವಸೂಲಿ ಮಾಡಿದೆ.

ಕೊರೊನಾ ಮೊದಲನೇ ಅಲೆ ಆರಂಭವಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಮಾಸ್ಕ್ ಧರಿಸದೆ ಇರುವವರ ಮೇಲೆ ದಂಡ ವಿಧಿಸಲಾಗುತ್ತಿತ್ತು. ಹೀಗೆ 2020 ಎಪ್ರಿಲ್ ನಿಂದ ಈವರೆಗೆ 1 ಕೋಟಿ 16 ಸಾವಿರದ 717 ರೂಗಳನ್ನು ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ 82,384 ಮಂದಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಇದ್ದು, ಇವರ ಬಳಿಯಿಂದ ಈ ದಂಡ ವಸೂಲಿ ಮಾಡಲಾಗಿದೆ.

- Advertisement -

Latest News

error: Content is protected !!