Friday, June 5, 2026
Homeಕ್ರೀಡೆಟೋಕಿಯೋ ಒಲಿಂಪಿಕ್ಸ್: ಸ್ಪೇನ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಜಯ!

ಟೋಕಿಯೋ ಒಲಿಂಪಿಕ್ಸ್: ಸ್ಪೇನ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಜಯ!

- Advertisement -
- Advertisement -

ಟೋಕಿಯೋ : ಸ್ಪೇನ್ ವಿರುದ್ಧ ಹಾಕಿ ಪಂದ್ಯದಲ್ಲಿ3-0 ಅಂತರದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧದ 1-7 ಸೋಲು ಅನುಭವಿಸಿದ ಭಾರತ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಮಿಡ್‌ ಫೀಲ್ಡರ್ ಸಿಮ್ರಾಂಜಿತ್ 13ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದಿದ್ದು, ಬಳಿಕ 15ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್​ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. 51ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆಯುವ ಮೂಲಕ ಸುಲಭವಾಗಿ ಗೆಲುವನ್ನು ಭಾರತ ದಾಖಲಿಸಿದೆ.

ಸಿಮ್ರಾನ್ ಜೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಅವರ ಗೋಲುಗಳು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದು, ಸದ್ಯ ಅರ್ಜಿಂಟೀನಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ಎದುರು 7-1 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಭಾರತ ಹಾಕಿ ತಂಡವು, ಬಲಿಷ್ಠ ಸ್ಪೇನ್‌ ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಚಿನ್ನ ಗೆಲ್ಲುಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

- Advertisement -

Latest News

error: Content is protected !!