ಬೆಳ್ತಂಗಡಿ : ಶೆಟ್ಟಿ ಆರ್ಟ್ಸ್ ಸಂಸ್ಥೆಯ ಕೀಲುಕುದುರೆ ಬಳಗದಲ್ಲಿನ ಸ್ತ್ರೀ ವೇಷಧಾರಿ ಜಗದೀಶ್(42.ವ)ರವರು ಜು.9 ರಂದು ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ.
ಮೂಲತಃ ಕಲ್ಮಂಜ ಗ್ರಾಮದ ಕುಕ್ಕಿಮಜಲು ನಿವಾಸಿಯಾದ ಇವರು ಪ್ರಸ್ತುತ ಕಕ್ಕಿಂಜೆ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಜು.8ರಂದು ರಾತ್ರಿ ಊಟ ಮುಗಿಸಿ ಮಲಗಿದವರು ನಿನ್ನೆ ಸಂಜೆಯವರೆಗೂ ಮನೆಯ ಬಾಗಿಲು ತೆರೆಯದೇ ಇದ್ದುದನ್ನು ಗಮನಿಸಿದ ಸ್ಥಳೀಯರು ಮನೆ ಬಾಗಿಲು ಒಡೆದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಒಂದೂವರೆ ವರ್ಷಗಳ ಹಿಂದೆಯಷ್ಟೇ ಇವರ ವಿವಾಹವಾಗಿದ್ದು, ಪತ್ನಿ ಶೋಭಾ ತಮ್ಮ ತವರು ಮನೆಗೆ ಹೋದಂತ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಧರ್ಮಸ್ಥಳ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ . ಈ ಸಾವು ಆಕಸ್ಮಿಕವೋ ಅಥವಾ ಅಸಹಜ ಸಾವೋ ಎಂಬುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಿದೆ.ಮೃತರು ಪತ್ನಿ ಶೋಭಾ, ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಬೆಳ್ತಂಗಡಿ: ಕೀಲುಕುದುರೆ ಸ್ತ್ರೀ ವೇಷಧಾರಿ ಜಗದೀಶ್ ನಿಧನ
- Advertisement -
![]()
- Advertisement -
- Advertisement -


