Friday, June 27, 2025
Homeಕರಾವಳಿಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವವರು ಈ ಸುದ್ದಿ ಓದಲೇ ಬೇಕು

ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವವರು ಈ ಸುದ್ದಿ ಓದಲೇ ಬೇಕು

spot_img
- Advertisement -
- Advertisement -

ಮಂಗಳೂರು: ಮಂಗಳೂರು- ಯಶವಂತಪುರ ನಡುವೆ ಸಂಚರಿಸುವ ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಡೋಮ್ ಬೋಗಿಗಳ ಜೋಡಣೆ ದಿನಾಂಕವನ್ನು ಮುಂದೂಡಲಾಗಿದ್ದು ಜು.11 ರಿಂದ ಪ್ರಾರಂಭವಾಗಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

ಈ ಮೊದಲು ಜು.7ರಿಂದ ಜೋಡಣೆಗೆ ನಿರ್ಧರಿಸಲಾಗಿತ್ತು.ರೈಲು ನಂ. 06539/06540 ಯಶವಂತಪುರ -ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಮಂಗಳೂರು ಜಂಕ್ಷನ್‌ನಿಂದ ಜು.11 ರಿಂದ ಹಾಗೂ ಯಶವಂತಪುರದಿಂದ ಜು.17 ರಿಂದ ವಿಸ್ಟಡೋಮ್ ಬೋಗಿ ಸೇರ್ಪಡೆಯಾಗಿ ಸಂಚರಿಸಲಿದೆ. ಜುಲೈ 7ರಿಂದ ಬುಕ್ಕಿಂಗ್ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!