Saturday, June 6, 2026
Homeತಾಜಾ ಸುದ್ದಿಆಮೀರ್ ಖಾನ್, ಕಿರಣ್ ರಾವ್ ವಿಚ್ಛೇದನಕ್ಕೆ ಕಾರಣವಾದ್ಳಾ ಆಕೆ?

ಆಮೀರ್ ಖಾನ್, ಕಿರಣ್ ರಾವ್ ವಿಚ್ಛೇದನಕ್ಕೆ ಕಾರಣವಾದ್ಳಾ ಆಕೆ?

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿರುವ ಸುದ್ದಿ ಹೊರ ಬೀಳುತ್ತಿದ್ದಂತೆ  ಸೋಷಿಯಲ್ ಮೀಡಿಯಾದಲ್ಲಿ ಎರಡು ವಿಚಾರಗಳು ಭಾರೀ ಸದ್ದು ಮಾಡುತ್ತಿವೆ.ಅದರಲ್ಲಿ ಮೊದಲನೆಯದು ಲವ್ ಜಿಹಾದ್ ಹಾಗೂ ಎರಡನೇಯದು ನಟಿ ಫಾತಿಮಾ ಸನಾ ಶೇಖ್.

ಹೌದು, ಅಮೀರ್ ಅವರು ಕಿರಣ್ ರಾವ್ ಜೊತೆಗಿನ 15 ವರ್ಷಗಳ ದಾಂಪತ್ಯ ಜೀವನ ಕಡಿದುಕೊಳ್ಳಲು ಫಾತಿಮಾ ಸನಾ ಶೇಖ್​ ಅವರೇ ಕಾರಣ ಎನ್ನುವ ಸುದ್ದಿ ಕೇಳಿ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಕಿರಣ್​ ರಾವ್ ಹಾಗೂ ಆಮೀರ್ ಖಾನ್​ ವಿಚ್ಛೇದನ ವಿಷಯ ಪ್ರಕಟಿಸುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಫಾತಿಮಾ ಸನಾ ಶೇಖ್ ಟ್ರೆಂಡಿಂಗ್​ನಲ್ಲಿದ್ದಾರೆ. ಅಮೀರ್ ಖಾನ್​ ಅವರ ಕುಟುಂಬದೊಂದಿಗೆ ತುಂಬಾ ಆತ್ಮೀಯವಾದ ಸಂಬಂಧ ಹೊಂದಿರುವ ಫಾತಿಮಾ ಈಗ ಟ್ರೋಲ್​ ಆಗುವುದರೊಂದಿಗೆ ಟ್ವಿಟರ್​ನಲ್ಲಿ ಟ್ರೆಂಡ್ ಸಹ ಆಗುತ್ತಿದ್ದಾರೆ.

ಅಮೀರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಪ್ರೀತಿಯಲ್ಲಿದ್ದಾರೆ. ಅದೇ ಕಾರಣಕ್ಕೆ ತಮ್ಮ ಪತ್ನಿಗೆ ಈ ನಟ ಡಿವೋರ್ಸ್ ನೀಡಿದ್ದಾರೆ ಎನ್ನುವ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

- Advertisement -

Latest News

error: Content is protected !!