Saturday, June 6, 2026
Homeಕರಾವಳಿಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಕಂಟೈನರ್ ಲಾರಿ, ಇಬ್ಬರು ಸಾವು..!

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಕಂಟೈನರ್ ಲಾರಿ, ಇಬ್ಬರು ಸಾವು..!

- Advertisement -
- Advertisement -

ಮಂಗಳೂರು: ಪಣಂಬೂರು ನಿನ್ನೆ ತಡರಾತ್ರಿ10:30 ಸುಮಾರಿಗೆ ಬಾರತ್ ಬೆಂಝ್ 10 ಚಕ್ರದ ಕನಟೈನರ್ ಲಾರಿ ನವಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಡ್ರೈವರ್ ನಿಯಂತ್ರಣ ತಪ್ಪಿ ಕಡಲಿಗೆ ಇಳಿದಿದ್ದು ಡ್ರೈವರ್ ಸೇರಿ ಲಾರಿಯ ಕ್ಲೀನರ್ ಕೂಡ ಸಾವನಪ್ಪಿರಬಹುದೆಂದು ಶಂಕಿಸಲಾಗಿದೆ,

ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (24) ಎಂಬವರ ಮೃತದೇಹ ಪತ್ತೆಯಾಗಿದ್ದು, ಲಾರಿ ಕ್ಲೀನರ್ ಮಲಕಪ್ಪ (35) ನಾಪತ್ತೆಯಾಗಿದ್ದಾರೆ. ಮಲಕಪ್ಪ ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

- Advertisement -

Latest News

error: Content is protected !!