Friday, June 5, 2026
Homeತಾಜಾ ಸುದ್ದಿಕ್ರಿಕೆಟ್ ಆಡುವಾಗ ತೆಂಗಿನ ಮರ ಬಿದ್ದು ಬಾಲಕ ಸಾವು, ಬಾಲಕಿಗೆ ಗಾಯ

ಕ್ರಿಕೆಟ್ ಆಡುವಾಗ ತೆಂಗಿನ ಮರ ಬಿದ್ದು ಬಾಲಕ ಸಾವು, ಬಾಲಕಿಗೆ ಗಾಯ

- Advertisement -
- Advertisement -

ಮೈಸೂರು  ಕ್ರಿಕೆಟ್ ಆಡುವಾಗ ತೆಂಗಿನ ಮರ ಬಿದ್ದು ಬಾಲಕ ಮೃತಪಟ್ಟು, ಬಾಲಕಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ  ನಂಜನಗೂಡಿನಲ್ಲಿ ನಡೆದಿದೆ

ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಘಟನೆ ಸಂಭವಿಸಿದ್ದು, ಅಭಯ್ (6) ಎಂಬ ಬಾಲಕ ಮೃತಪಟ್ಟಿದ್ದಾನೆ.

ಕ್ರಿಕೆಟ್ ಆಡುವಾಗ ತೆಂಗಿನ ಮರ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, ಬಾಲಕಿಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಸಾವಿನಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!