Thursday, June 4, 2026
Homeಕರಾವಳಿಮಂಗಳೂರು: ನಿಂತಿದ್ದ ಟ್ಯಾಂಕರ್ ಗೆ ಓಮ್ನಿ ಕಾರು ಢಿಕ್ಕಿ, ಒಣಮೀನು ವ್ಯಾಪಾರಿಗಳಿಬ್ಬರು ಸಾವು

ಮಂಗಳೂರು: ನಿಂತಿದ್ದ ಟ್ಯಾಂಕರ್ ಗೆ ಓಮ್ನಿ ಕಾರು ಢಿಕ್ಕಿ, ಒಣಮೀನು ವ್ಯಾಪಾರಿಗಳಿಬ್ಬರು ಸಾವು

- Advertisement -
- Advertisement -

ಮಂಗಳೂರು: ನಿಂತಿದ್ದ ಟ್ಯಾಂಕರ್ ಗೆ ಓಮ್ನಿ ಕಾರು ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಮಂಗಳೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಬಳಿ ನಡೆದಿದೆ.

ಮೃತರನ್ನು ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಎಂದು ಗುರುತಿಸಲಾಗಿದೆ. ಎಂಡಿ ಮುಸ್ತಫಾ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮಂಗಳೂರಿನ ದಕ್ಕೆಯಲ್ಲಿ ಒಣ ಮೀನು ವ್ಯಾಪಾರಿಗಳಾಗಿದ್ದರು.

ಮಂಗಳೂರಿನಿಂದ ಬಿಸಿರೋಡ್ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಯಾರ್ ಮಾಂಡೋವಿ ಕಾರು ಶೋ ರೂಂ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡದಿದೆ. ಅಪಘಾತದ ತೀವ್ರತೆಗೆ ಓಮ್ನಿ ಸಂಫೂರ್ಣ ನಜ್ಜುಗುಜ್ಜಾಗಿದೆ.

- Advertisement -

Latest News

error: Content is protected !!