Thursday, June 4, 2026
Homeಕರಾವಳಿಲಾಕ್​ಡೌನ್ ನಡುವೆಯೂ ಸುಳ್ಯದಲ್ಲಿ ಜೂಜಾಟ: ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ 10 ಮಂದಿ ಸೆರೆ

ಲಾಕ್​ಡೌನ್ ನಡುವೆಯೂ ಸುಳ್ಯದಲ್ಲಿ ಜೂಜಾಟ: ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ 10 ಮಂದಿ ಸೆರೆ

- Advertisement -
- Advertisement -

ಸುಳ್ಯ: ರಾಜ್ಯಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದೆ. ಈ ನಡುವೆ ಸುಳ್ಯದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಮಾಜಿ ಜಿ.ಪಂ.ಸದಸ್ಯ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕ ಎಂಬಲ್ಲಿ ಆರೋಪಿಗಳಾದ ಬಿಜೆಪಿಯ ಮಾಜಿ ಜಿ.ಪಂ. ಸದಸ್ಯ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನ್ ದಾಸ್, ಅಶೋಕ, ದಯಾನಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1,890 ರೂ. ನಗದು, ವಾಹನ ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿತ ಪ್ರಕಾರ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!