Sunday, June 7, 2026
Homeತಾಜಾ ಸುದ್ದಿವೆಂಟಿಲೇಟರ್, ಬೆಡ್ ಸಿಗದೆ ಕೊರೋನಾಗೆ ಬಲಿಯಾದ ಕನ್ನಡದ ಹಿರಿಯ ಹಾಸ್ಯನಟ

ವೆಂಟಿಲೇಟರ್, ಬೆಡ್ ಸಿಗದೆ ಕೊರೋನಾಗೆ ಬಲಿಯಾದ ಕನ್ನಡದ ಹಿರಿಯ ಹಾಸ್ಯನಟ

- Advertisement -
- Advertisement -

ಬೆಂಗಳೂರು: ಸಿನಿಮಾ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದ ಹಾಸ್ಯಲೋಕದ ದಿಗ್ಗಜ ಎಂದೇ ಜನಪ್ರೀಯತೆ ಪಡೆದಿದ್ದ ಖ್ಯಾತ ಹಾಸ್ಯನಟ ರಾಜಾರಾಂ(82) ಇಂದು ಕೊರೋನಾ ಸೋಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ರಾಜಾರಾಮ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಸಂಜೆ ಪಾಸಿಟಿವ್ ರಿಪೋರ್ಟ್ ಕೂಡ ಬಂದಿತ್ತು. ಬೆಡ್ ಸಿಗದ ಕಾರಣ ಮನೆಯಲ್ಲಿಯೇ ಹೋಂ ಕ್ವಾರಟೈನ್ ಮಾಡಲಾಗಿತ್ತು. ಸೋಮವಾರ ಉಸಿರಾಟದ ತೊಂದರೆ ಹೆಚ್ಚಾಗಿ ತಮ್ಮ ಬೆಂಗಳೂರಿನ ಮನೆಯಲ್ಲಿ ನಿಧನರಾಗಿದ್ದಾರೆ.

ಈ ಕುರಿತಂತೆ ನಟ ಸೃಜನ್ ಲೋಕೇಶ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ, ಮಾಹಿತಿ ಹಂಚಿಕೊಂಡಿದ್ದು, ಹಾಸ್ಯನಟ ರಾಜಾರಾಂ ಇನ್ನಿಲ್ಲವಾಗಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

- Advertisement -

Latest News

error: Content is protected !!