Thursday, June 4, 2026
Homeತಾಜಾ ಸುದ್ದಿಕೋವಿಡ್ ಗೆ ಹೆತ್ತವರು ಬಲಿ, ಅನಾಥವಾದ 4 ವರ್ಷದ ಕಂದಮ್ಮ

ಕೋವಿಡ್ ಗೆ ಹೆತ್ತವರು ಬಲಿ, ಅನಾಥವಾದ 4 ವರ್ಷದ ಕಂದಮ್ಮ

- Advertisement -
- Advertisement -

ಚಾಮರಾಜನಗರ: ಕೋವಿಡ್ ಸೋಂಕಿನಿಂದ ತಂದೆ ತಾಯಿ ಇಬ್ಬರೂ ಮೃತಪಟ್ಟು  ನಾಲ್ಕೂವರೆ ವರ್ಷದ ಹೆಣ್ಣುಮಗು ಅನಾಥವಾದ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಎಂಬಲ್ಲಿ ನಡೆದಿದೆ.

ಕೊತ್ತಲವಾಡಿ ನಿವಾಸಿ ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಕೋವಿಡ್ ಗೆ ಬಲಿಯಾದ ದಂಪತಿ.

ಕೆಲವು ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿದ್ದ ಈ ದಂಪತಿ ಹೋಂ ಐಸೋಲೇಷನ್ ನಲ್ಲಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುಪ್ರಸಾದ್ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಶನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಕೂಡಾ ಕಳೆದ ರಾತ್ರಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ದಂಪತಿಯ ನಾಲ್ಕೂವರೆ ವರ್ಷದ ಪುತ್ರಿ ಸುಧಾರಾಣಿ ಸದ್ಯ ಅಜ್ಜಿಯ ಆರೈಕೆಯಲ್ಲಿದ್ದರು. ಇದೀಗ ಅಜ್ಜಿಗೂ ಕೋವಿಡ್ ಸೋಂಕು ತಗಲಿದೆ ಎಂದು ತಿಳಿದುಬಂದಿದೆ.ಇದೀಗ ಹೆತ್ತವರನ್ನು ಕಳೆದುಕೊಂಡು ಮಗು ಅನಾಥವಾಗಿದೆ.

- Advertisement -

Latest News

error: Content is protected !!