Thursday, April 25, 2024
Homeತಾಜಾ ಸುದ್ದಿನನಗೆ ಆಕ್ಸಿಜನ್ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ಕೊರೊನಾಗೆ ಬಲಿ

ನನಗೆ ಆಕ್ಸಿಜನ್ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ಕೊರೊನಾಗೆ ಬಲಿ

spot_img
- Advertisement -
- Advertisement -

ನವದೆಹಲಿ: ಕೊರೊನಾ ವೈರಸ್​ಗೆ ಬಲಿಯಾಗುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರು ಕಲಾವಿದರನ್ನು ಈ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಿದೆ. ಈಗ ನಟ ರಾಹುಲ್​ ವೋಹ್ರಾ ನಿಧನರಾಗಿದ್ದಾರೆ.

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ(ಮೇ9) ಕೊನೆಯುಸಿರೆಳೆದಿದ್ದಾರೆ. ಅದಕ್ಕೂ ಒಂದು ದಿನ ಮುಂಚೆ ಅವರು ಉತ್ತಮ ಚಿಕಿತ್ಸೆ ಬೇಕು ಎಂದು ಸೋಶಿಯಲ್​ ಮೀಡಿಯಾ ಮೂಲಕ ನರೇಂದ್ರ ಮೋದಿ ಅವರನ್ನು ಕೈ ಮುಗಿದು ಬೇಡಿಕೊಂಡಿದ್ದರು.

‘ನನಗೂ ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನು ಕೂಡ ಬದುಕುತ್ತಿದ್ದೆ. ಮತ್ತೆ ಜನ್ಮತಾಳಿ ಬಂದು ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಶನಿವಾರ ಫೇಸ್​ಬುಕ್​ನಲ್ಲಿ ರಾಹುಲ್​ ಬರೆದುಕೊಂಡಿದ್ದರು. ತಾವಿರುವ ಆಸ್ಪತ್ರೆಯ ಹೆಸರು, ತಮ್ಮ ವಯಸ್ಸು, ಬೆಡ್ ಸಂಖ್ಯೆ ಮುಂತಾದ ವಿವರಗಳನ್ನು ಈ ಪೋಸ್ಟ್​ನಲ್ಲಿ ಬರೆದು, ದಯವಿಟ್ಟು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್​ ವೋಹ್ರಾ ಟ್ಯಾಗ್​ ಮಾಡಿದ್ದರು. ಅವರು ನಿಧನರಾಗಿರುವ ಸುದ್ದಿಯನ್ನು ನಟ, ನಿರ್ದೇಶಕ, ನಾಟಕಕಾರ ಅರವಿಂದ್​ ಗೌರ್​​ ಖಚಿತ ಪಡಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ರಾಹುಲ್​ ಅವರಿಗೆ ಕೊರೊನಾ ವೈರಸ್​ ತಗುಲಿತ್ತು. ಆ ಬಗ್ಗೆ ಅವರು ಅಸಹಾಯಕತೆಯಿಂದ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ‘ನನಗೆ ಕೊವಿಡ್​ ಪಾಸಿಟಿವ್​ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಲ್ಕು ದಿನದಿಂದ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ನನಗೆ ಎಲ್ಲಿ ಆಕ್ಸಿಜನ್​ ಬೆಡ್​ ಸಿಗಬಹುದು? ನನ್ನ ಆಕ್ಸಿಜನ್​ ಮಟ್ಟ​ ಕಡಿಮೆ ಆಗುತ್ತಲೇ ಇದೆ. ಇಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ರಾಹುಲ್​ ಅಂಗಲಾಚಿದ್ದರು.

- Advertisement -
spot_img

Latest News

error: Content is protected !!