Sunday, October 18, 2026
Homeಕರಾವಳಿಮಂಗಳೂರು: 'ನಾನು ಯಮಲೋಕಕ್ಕೆ ಹೋಗಿ 7 ದಿನ ಇದ್ದು ಬಂದಿದ್ದೇನೆ' ಎಂದು ಹುಚ್ಚಾಟ ಮೆರೆದ ಮಹಿಳೆ

ಮಂಗಳೂರು: ‘ನಾನು ಯಮಲೋಕಕ್ಕೆ ಹೋಗಿ 7 ದಿನ ಇದ್ದು ಬಂದಿದ್ದೇನೆ’ ಎಂದು ಹುಚ್ಚಾಟ ಮೆರೆದ ಮಹಿಳೆ

- Advertisement -
- Advertisement -

ಮಂಗಳೂರು: ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆ ಬೇಕಾಬಿಟ್ಟಿ ಮಾತನಾಡಿ, ಹುಚ್ಚಾಟ ಮೆರೆದಿರುವ ಘಟನೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ನಡೆದಿದೆ.

ಅಧಿಕಾರಿಗಳು ಮಾಸ್ಕ್ ಕಾರ್ಯಾಚರಣೆ ನಡೆಸುವ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಮಹಿಳೆ ಅನುಚಿತವಾಗಿ ವರ್ತಿಸಿದ್ದಾರೆ.

ನಾನು ಯಮ ಲೋಕಕ್ಕೆ ಹೋಗಿ ಬಂದಿದ್ದೇನೆ, ಗದೆ ಹಾಕಿಕೊಂಡು ಯಮಲೋಕಕ್ಕೆ ಹೋಗಿ, 7 ದಿನ ಇದ್ದು ಬಂದಿದ್ದೇನೆ. ಕೊರೊನಾ ನ್ಯೂಸ್ ನಲ್ಲಿ ಬಂದರೆ ಅದು ಡಸ್ಟ್ ಬೀನ್ ಗೆ ಬೀಳುತ್ತದೆ. ಇಲ್ಲದಿದ್ದರೆ ಕೊರೊನಾ ಹೋಗುವುದಿಲ್ಲ. ವೈರಸ್ ಮಾಡಿದ ಥರ್ಡ್ ಕ್ಲಾಸ್ ಯಾರವನು? ಎಂದು ಬೇಕಾಬಿಟ್ಟಿ ಮಾತನಾಡಿದ್ದು, ಮಹಿಳೆಯ ಹುಚ್ಚಾಟ ಕಂಡು ಅಧಿಕಾರಿಗಳಿಗೆ ಫುಲ್ ಶಾಕ್ ಆಗಿದೆ. ಮಹಿಳೆ ಮದ್ಯ ಸೇವಿಸಿ ಈ ರೀತಿ ಮಾತಾಡಿದ್ದಾಳಾ ಎಂಬ ಬಗ್ಗೆ ಅನುಮಾನವಿದೆ.

- Advertisement -

Latest News

error: Content is protected !!