Friday, May 17, 2024
Homeತಾಜಾ ಸುದ್ದಿಇಂದು ರಾತ್ರಿಯಿಂದಲೇ ಸ್ಥಬ್ಧವಾಗಲಿದೆ ಕರ್ನಾಟಕ: ಇನ್ನೆರಡು ದಿನ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?

ಇಂದು ರಾತ್ರಿಯಿಂದಲೇ ಸ್ಥಬ್ಧವಾಗಲಿದೆ ಕರ್ನಾಟಕ: ಇನ್ನೆರಡು ದಿನ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?

spot_img
- Advertisement -
- Advertisement -

ಬೆಂಗಳೂರು : ಇಂದು ರಾತ್ರಿಯಿಂದಲೇ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಹಾಗಾಗಿ ಇಂದು ರಾತ್ರಿಯಿಂದಲೇ ಕರುನಾಡು ಸ್ಥಬ್ಧವಾಗಲಿದೆ. ಬಹುತೇಕ ಎಲ್ಲಾ ಸೇವೆಗಳು ಬಂದ್ ಆಗಲಿವೆ. ಹಾಗಾದ್ರೆ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ ಅನ್ನೋದನ್ನು ನೋಡೋಣ…

ಏನಿರುತ್ತೆ?

•ತುರ್ತು ಸೇವೆ ಒದಗಿಸುವವರು ಓಡಾಡಬಹುದು

•ತುರ್ತು ಸೇವೆ ಒದಗಿಸುವ ಕಂಪನಿಗಳು ಕಾರ್ಯನಿರ್ವಹಿಸಬಹುದು

•ಟೆಲಿಕಾಂ,ಇಂಟರ್‍ನೆಟ್ ಸರ್ವಿಸ್‍ನವರು ಓಡಾಡಬಹುದು

•ಬೆಳಿಗ್ಗೆ 6ರಿಂದ 10ರವರೆಗೆ ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿ ತೆರೆಯಬಹುದು

•ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ

•ಬೇರೆ ಜಿಲ್ಲೆ, ರಾಜ್ಯಕ್ಕೆ ಹೋಗುವವರಿಗೆ ಬಸ್, ವಿಮಾನ ಪ್ರಯಾಣಕ್ಕೆ ಅನುಮತಿ ಇದೆ.

ಹಾಗೇ ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್ ಅಥವಾ ವಿಮಾನ ನಿಲ್ದಾಣಕ್ಕೆ ತೆರಳಲು ಸಾರ್ವಜನಿಕ ಸಾರಿಗೆ ಟ್ಯಾಕ್ಸಿ, ಆಟೋ, ಖಾಸಗಿ ವಾಹನ ಬಳಸಬಹುದು. ಪ್ರಯಾಣಿಕರು ಟಿಕೆಟ್ ತೋರಿಸಬೇಕು

•ಕಂಪನಿ ಐಡಿ ಕಾರ್ಡ್ ತೋರಿಸಿ ಕೆಲಸಕ್ಕೆ ಹೋಗಬಹುದು

•ವೀಕೆಂಡ್‍ನಲ್ಲಿ ಬೆಳಿಗ್ಗೆ, ಸಂಜೆ ಪಾರ್ಕ್ ಓಪನ್

•ಪಾರ್ಕ್ ಗಳಲ್ಲಿ ಜನರ ವಾಕಿಂಗ್‍ಗೆ ಅವಕಾಶ

• ಪರಿಸ್ಥಿತಿ ನೋಡಿಕೊಂಡು ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ

ಏನಿರಲ್ಲ?

•ಸಿನಿಮಾ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್

•ಧಾರ್ಮಿಕ ಕೇಂದ್ರಗಳೀಗೆ ಜನರ ಪ್ರವೇಶ ಇಲ್ಲ

•ಶಾಪಿಂಗ್ ಮಾಲ್, ಬಾರ್‍ಗಳು ಬಂದ್

•ಧಾರ್ಮಿಕ ಸಭೆ, ಸಮಾರಂಭ ಎಲ್ಲವೂ ಬಂದ್

•ಮಸೀದಿ, ಚರ್ಚ್, ದೇಗುಲಗಳಿಗೆ ಅರ್ಚಕರು, ಮೌಲ್ವಿಗಳಿಗೆ ಮಾತ್ರ ಅವಕಾಶವಿರುತ್ತೆ

•ಆದ್ರೆ ಭಕ್ತರು ದರ್ಶನಕ್ಕೆ ಬರುವಂತಿಲ್ಲ

•ವಾರಾಂತ್ಯ ಕಟ್ಟಡ ನಿರ್ಮಾಣ ಬಂದ್

•ಎರಡು ದಿನ ನಮ್ಮ ಮೆಟ್ರೋ ಸಂಚಾರ ರದ್ದು

*ಬಿಎಂಟಿಸಿ ಬಸ್ ಸಂಚಾರ ಇರೋದಿಲ್ಲ

- Advertisement -
spot_img

Latest News

error: Content is protected !!