Monday, June 15, 2026
Homeಕರಾವಳಿಮಂಗಳೂರಿನಲ್ಲಿ ಮಾನವೀಯತೆ ಮರೆತ ದುರುಳರು: ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದುಕೊಂಡು ಹೋದ ಪಾಪಿಗಳು

ಮಂಗಳೂರಿನಲ್ಲಿ ಮಾನವೀಯತೆ ಮರೆತ ದುರುಳರು: ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದುಕೊಂಡು ಹೋದ ಪಾಪಿಗಳು

- Advertisement -
- Advertisement -

ಮಂಗಳೂರು ಇತ್ತೀಚೆಗೆ ಕೇರಳದಲ್ಲಿ ಪಟಾಕಿ ತುಂಬಿದ ಅನಾನಸನ್ನು ಗರ್ಭಿಣಿ ಆನೆಗೆ ನೀಡಿ ಅದನ್ನು ಕೊಂದ ಘಟನೆ ನಿಮಗೆಲ್ಲಾ ನೆನಪಿರಬಹುದು. ಇಡೀ ದೇಶವೇ ಈ ಘಟನೆಗೆ ಮುಮ್ಮಲ ಮರುಗಿತ್ತು. ಪಾಪಿಗಳಿಗೆ ಜನ ಹಿಡಿ ಶಾಪ ಹಾಕಿದ್ರು. ಅಂತಹದ್ದೇ ಅಮಾನವೀಯ ಘಟನೆಯೊಂದು ಕರಾವಳಿಯಲ್ಲಿ ನಡೆದಿದೆ.

ಹೌದು.. ಇದು ಕರಾವಳಿ ಮಂದಿ ತಲೆತಗ್ಗಿಸುವಂತಹ ವಿಚಾರ.ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯ ಎನ್ ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂತಹದ್ದೊಂದು ಘಟನೆ ನಡೆದಿದೆ. ಪಾಪಿಗಳು ನಾಯಿಯೊಂದನ್ನು ಬೈಕ್ ಗೆ ಕಟ್ಟಿ ಅದನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ.ಇನ್ನು ಏಪ್ರಿಲ್ 15 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು. ಇನ್ನೊಂದು ಬೈಕ್ ನಲ್ಲಿ ಹೋಗುತ್ತಿದ್ದ ಸವಾರರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.ಕರಾವಳಿಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕೂಡಲೇ ಈ ಪಾಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಅನ್ನೋ ಆಗ್ರಹ ಕೇಳಿ ಬರುತ್ತಿದೆ.

- Advertisement -

Latest News

error: Content is protected !!