Thursday, April 25, 2024
Homeತಾಜಾ ಸುದ್ದಿಕೊರೊನಾ ಮಾರ್ಗಸೂಚಿಯಂತೆ ಅನಗತ್ಯ ಸೇವೆಗಳಿಗೆ ಬ್ರೇಕ್ ಹಾಕಿದ ಸರ್ಕಾರ: ನಾನು ಗರ್ಲ್ ಫ್ರೆಂಡ್ ನ್ನು...

ಕೊರೊನಾ ಮಾರ್ಗಸೂಚಿಯಂತೆ ಅನಗತ್ಯ ಸೇವೆಗಳಿಗೆ ಬ್ರೇಕ್ ಹಾಕಿದ ಸರ್ಕಾರ: ನಾನು ಗರ್ಲ್ ಫ್ರೆಂಡ್ ನ್ನು ಮೀಟ್ ಆಗ್ಬೇಕು ಏನು ಮಾಡ್ಲಿ ಎಂದು ಪೊಲೀಸರನ್ನೇ ಕೇಳಿದ ಭೂಪ: ಪೊಲೀಸರ ಉತ್ತರ ನೋಡಿ ಟ್ವೀಟ್ ಮಾಡಿದಾತ ಶಾಕ್

spot_img
- Advertisement -
- Advertisement -

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ  ಕೊರೊನಾ ಕೇಸ್​ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್​ ಇಲಾಖೆ ಕೆಲ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ರಸ್ತೆಯಲ್ಲಿ ಟ್ರಾಫಿಕ್​ ತಪ್ಪಿಸುವ ಸಲುವಾಗಿ ಕಲರ್​ ಕೋಡೆಡ್​​ ಸ್ಟಿಕರ್​ಗಳನ್ನ ತುರ್ತು ಸೇವಾ ವಾಹನಗಳಿಗೆ ಅಳವಡಿಸಿದ್ದಾರೆ.

ಮುಂಬೈ ಪೊಲೀಸ್​ ಇಲಾಖೆ ಈ ನಿರ್ಧಾರದ ಬಳಿಕ ಟ್ವಿಟರ್​ ಖಾತೆಯಲ್ಲಿ ಜನಸಾಮಾನ್ಯರು ತಮ್ಮ ಗೊಂದಲಗಳನ್ನ ಕೇಳಿದ್ದಾರೆ. ಸಾಧ್ಯವಾದಷ್ಟು ಎಲ್ಲಾ ಗೊಂದಲಗಳಿಗೆ ಉತ್ತರಿಸಲು ಪೊಲೀಸ್​ ಇಲಾಖೆ ಶ್ರಮಿಸಿದೆ. ಆದರೆ ಅಶ್ವಿನ್​ ವಿನೋದ್​ ಎಂಬ ಹೆಸರಿನ ಟ್ವಿಟರ್​ ಬಳಕೆದಾರರು ಗರ್ಲ್​ ಫ್ರೆಂಡ್​ ಭೇಟಿಯಾಗಬೇಕು ಅಂದರೆ ನಮ್ಮ ವಾಹನಕ್ಕೆ ಯಾವ ಬಣ್ಣದ ಸ್ಟಿಕರ್​ ಹಾಕಿಕೊಳ್ಳಬೇಕು ಎಂದು ಪೊಲೀಸರನ್ನ ಪ್ರಶ್ನೆ ಮಾಡಿದ್ದಾರೆ. ಟ್ವೀಟಿಗನ ಈ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ ಮುಂಬೈ ಪೊಲೀಸ್​ ಇಲಾಖೆ, ನಿಮಗೆ ಇದೊಂದು ತುರ್ತು ಕೆಲಸ ಅನ್ನೋದು ನಮಗೆ ಅರ್ಥವಾಗುತ್ತೆ. ಆದರೆ ನಮ್ಮ ತುರ್ತು ಕೆಲಸಗಳ ಅಡಿಯಲ್ಲಿ ಈ ವಿಭಾಗ ಬರೋದಿಲ್ಲ. ಅಂತರ ಕಾಯ್ದುಕೊಳ್ಳೋದ್ರಿಂದ ಪ್ರೀತಿ ಇನ್ನಷ್ಟು ಗಟ್ಟಿಯಾಗುತ್ತೆ. ಅಲ್ಲದೇ ನೀವು ಕೂಡ ಆರೋಗ್ಯವಾಗಿ ಇರುತ್ತೀರಾ ಎಂದು ಪ್ರತಿಕ್ರಿಯೆ ನೀಡಿದೆ. ನೀವಿಬ್ಬರು ಜೀವಮಾನವಿಡೀ ಒಂದಾಗಿರಿ ಎಂದು ಹಾರೈಸುತ್ತೇವೆ .ಇದೊಂದು ಹಂತವಷ್ಟೇ ಎಂದು ಹೇಳಿದ್ದಾರೆ

- Advertisement -
spot_img

Latest News

error: Content is protected !!