Thursday, June 4, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ‌ ಸಂಸ್ಕಾರ ಸೇವೆ ಸ್ಥಗಿತ: ಪೂಜೆಗಾಗಿ ಬಂದ ಭಕ್ತರಿಂದ ಆಕ್ರೋಶ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ‌ ಸಂಸ್ಕಾರ ಸೇವೆ ಸ್ಥಗಿತ: ಪೂಜೆಗಾಗಿ ಬಂದ ಭಕ್ತರಿಂದ ಆಕ್ರೋಶ

- Advertisement -
- Advertisement -

ಸುಬ್ರಹ್ಮಣ್ಯ: ಸರ್ಕಾರದ ಆದೇಶ ಪಾಲನೆಯ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ಸರ್ಪ‌ ಸಂಸ್ಕಾರ ಸೇವೆಯನ್ನು ಬಂದ್ ಮಾಡಲಾಗಿದೆ.

ಈ‌ ಮಾಹಿತಿ‌ ಅರಿಯದೆ ದೂರದ ಊರುಗಳಿಂದ ಕುಕ್ಕೆಗೆ ಬಂದಿರುವ ಭಕ್ತರು, ಆಡಳಿತ‌ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ‘ಸರ್ಪ ಸಂಸ್ಕಾರ ನಡೆಸಲು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದಿದ್ದೆವು. 2-3 ತಿಂಗಳುಗಳ ಹಿಂದೆ ಸರ್ಪ ಸಂಸ್ಕಾರ ಸೇವೆಯನ್ನು ಬುಕ್ ಮಾಡಲಾಗಿತ್ತು. ನಮಗೆ‌ ನೀಡಿದ್ದ ದಿನಾಂಕಕ್ಕೆ ಅನುಗುಣವಾಗಿ ಬುಧವಾರ ದೇವಾಲಯಕ್ಕೆ ಬಂದಿದ್ದೇವೆ. ದೂರದ ಊರುಗಳಿಂದ‌ ಪ್ರಯಾಣ ಮಾಡಿ ಬಂದಿರುವ‌ ನಮಗೆ, ಈಗ‌ ಸೇವೆ ಲಭ್ಯ ಇಲ್ಲ ಎಂಬ ಮಾಹಿತಿಯನ್ನು‌ ನೀಡುತ್ತಿದ್ದಾರೆ’ ಎಂದು ಭಕ್ತರು ಅ.

‘ಸರ್ಕಾರದ ಆದೇಶ‌ ಪಾಲಿಸುವುದು ಅನಿವಾರ್ಯ. ಸರ್ಪ ಸಂಸ್ಕಾರ‌ ಸೇವೆ ಎರಡು‌ ದಿನ ನಡೆಯುತ್ತದೆ. ಗುರುವಾರಕ್ಕೆ ಸೇವೆಗೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬುಧವಾರ ಬಂದ್ ಮಾಡಲಾಗಿದೆ’ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!