Wednesday, June 24, 2026
Homeಕರಾವಳಿಕಾಸರಗೋಡುಬದಿಯಡ್ಕದಲ್ಲಿ ಆಂಬುಲೆನ್ಸ್- ಸ್ಕೂಟರ್ ನಡುವೆ ಅಪಘಾತ: ಬಾಲಕ ಸ್ಥಳದಲ್ಲೇ ಸಾವು

ಬದಿಯಡ್ಕದಲ್ಲಿ ಆಂಬುಲೆನ್ಸ್- ಸ್ಕೂಟರ್ ನಡುವೆ ಅಪಘಾತ: ಬಾಲಕ ಸ್ಥಳದಲ್ಲೇ ಸಾವು

- Advertisement -
- Advertisement -

ಕಾಸರಗೋಡು: ಆಂಬುಲೆನ್ಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸಹ ಸವಾರ ಬಾಲಕನೋರ್ವ ಮೃತಪಟ್ಟ ಘಟನೆ ನಿನ್ನೆ ಸಂಜೆ ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕ ಪೆರಡಾಲದ ಅಬ್ದುಲ್ ಶಾಹಿಲ್ (16) ಮೃತಪಟ್ಟ ಬಾಲಕ. ಸ್ಕೂಟರ್ ಚಲಾಯಿಸುತ್ತಿದ್ದ ಮೂಕಂಪಾರೆಯ ಅಬ್ದುಸ್ಸಮದ್ (19) ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ

ಬದಿಯಡ್ಕ ಸರ್ಕಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ತೆರಳುತ್ತಿದ್ದ ಆಯಂಬುಲೆನ್ಸ್ ಮತ್ತು ಸ್ಕೂಟರ್ ನಡುವೆ ಅಪಘಾತ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರರಿಬ್ಬರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಹಿಲ್ ಕೊನೆಯುಸಿರೆಳೆದಿದ್ದಾರೆ. ಅಬ್ದುಸ್ಸಮದ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!