Thursday, June 4, 2026
Homeಕರಾವಳಿಮಂಗಳೂರು: ರೈಲು ಹಳಿಯ ಮೇಲೆ ಕೊಲೆಯಾದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ!

ಮಂಗಳೂರು: ರೈಲು ಹಳಿಯ ಮೇಲೆ ಕೊಲೆಯಾದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ!

- Advertisement -
- Advertisement -

ಮಂಗಳೂರು: ಇಂದು ಬೆಳಿಗ್ಗೆ ನಗರದ ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿ ಹಾದುಹೋಗಿರುವ ರೈಲ್ವೆ ಹಳಿಯ ಮೇಲೆ ಕೂಲಿ ಕಾರ್ಮಿಕನೊಬ್ಬನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಗಲಕೋಟೆ ಮೂಲದ ಎಲ್ಲಪ್ಪ (47 ವ) ಮೃತ ಕಾರ್ಮಿಕ. ರವಿವಾರ ರಾತ್ರಿ ಯಾವುದೋ ವಿಚಾರಕ್ಕೆ ಜಗಳವಾಗಿ ಕೊಲೆಗೈದಿರುವ ಸಾಧ್ಯತೆಯಿದೆ.

ಸೋಮವಾರ ಬೆಳಿಗ್ಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಶವ ಕಂಡು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕೊಲೆ ಶಂಕೆಯಾಗಿರುವುದರಿಂದ ಸ್ಥಳಕ್ಕೆ ಬೆರಳಚ್ಚು ತಜ್ಞರು,ಶ್ವಾನ ದಳವನ್ನು ಕರೆಸಲಾಗಿದೆ.

- Advertisement -

Latest News

error: Content is protected !!