Thursday, June 4, 2026
Homeಕರಾವಳಿಪುತ್ತೂರು: ಮೊಬೈಲ್ ಫೋನ್ ಸುಟ್ಟು ಹಾಕಿ ಆತ್ಮಹತ್ಯೆಗೆ ಶರಣಾದ ರಿಕ್ಷಾ ಡ್ರೈವರ್ !

ಪುತ್ತೂರು: ಮೊಬೈಲ್ ಫೋನ್ ಸುಟ್ಟು ಹಾಕಿ ಆತ್ಮಹತ್ಯೆಗೆ ಶರಣಾದ ರಿಕ್ಷಾ ಡ್ರೈವರ್ !

- Advertisement -
- Advertisement -

ಪುತ್ತೂರು: ರಿಕ್ಷಾ ಚಾಲಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್ ಅನ್ನು ಸುಟ್ಟು ಹಾಕಿ ನಂತರ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಯ್ಯೂರು ಗ್ರಾಮದ ದೇರ್ಲ ಎಂಬಲ್ಲಿ ನಡೆದಿದೆ.

ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ಶಿವರಾಜ್ (27 ವ) ಆತ್ಮಹತ್ಯೆ ಮಾಡಿಕೊಂಡ ಯುವಕ.

ನಿನ್ನೆ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ನಸುಕಿನ ಜಾವ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ‌ಕಾರಣ ತಿಳಿದು ಬಂದಿಲ್ಲ. ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!