Friday, March 29, 2024
Homeಕರಾವಳಿಸೆಕ್ಯೂರಿಟಿ ಗಾರ್ಡ್ ಒಂದು ಕೋಟಿ ಗೆದ್ದ ಸುದ್ದಿಯಲ್ಲಿ ಟ್ವಿಸ್ಟ್ : ಲಾಟರಿ ಟಿಕೆಟ್ ಎಡಿಟ್...

ಸೆಕ್ಯೂರಿಟಿ ಗಾರ್ಡ್ ಒಂದು ಕೋಟಿ ಗೆದ್ದ ಸುದ್ದಿಯಲ್ಲಿ ಟ್ವಿಸ್ಟ್ : ಲಾಟರಿ ಟಿಕೆಟ್ ಎಡಿಟ್ ಮಾಡಿಸಿ ಎಲ್ಲರ ಕಿವಿಗೆ ಹೂವಿಟ್ಟ ಕೇರಳ ಮ್ಯಾನ್

spot_img
- Advertisement -
- Advertisement -

ಮಂಗಳೂರು : ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ಸೆಕ್ಯೂರಿಟಿ  ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕೇರಳ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ(65) 1 ಕೋಟಿ ಕೇರಳ ಲಾಟರಿ ಗೆದ್ದಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ  ನಿನ್ನೆಯಿಂದ ಸುದ್ದಿಯಾಗುತ್ತಿದೆ. ಆದ್ರೀಗ ಈ ವಿಚಾರ ಸುಳ್ಳು ಅನ್ನೋದು ಬಹಿರಂಗವಾಗಿದೆ.

ಒಂದು ಕೋಟಿ ಲಾಟರಿ ಬಂದಿದೆ ಎಂದು ಲಾಟರಿ ಟಿಕೆಟ್ ನ್ನು ಮೊಯ್ದಿನ್ ಕುಟ್ಟಿ ಸೈಬರ್ ನಲ್ಲಿ ಎಡಿಟ್ ಮಾಡಿಸಿ ಎಲ್ಲರ ಕಿವಿಗೆ ಹೂವಿಟ್ಟಿದ್ದಾರೆ ಅನ್ನೋದು ಬಯಲಾಗಿದೆ. ಇನ್ನು ಈ ವ್ಯಕ್ತಿ  ಹಲವರಲ್ಲಿ ಸಾಲ ಮಾಡಿದ್ದರು ಅನ್ನೋದು ಗೊತ್ತಾಗಿದೆ.  ಇದೀಗ ವಿಚಾರ ಎಲ್ಲರಿಗೂ ಗೊತ್ತಾಗುತ್ತಿದ್ದಂತೆ ಅವರು ಊರು ಬಿಟ್ಟು ಹೋಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!