Saturday, June 6, 2026
Homeಕರಾವಳಿಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆ: ಈಗಾಗಲೇ ಬಂಧಿತರಾಗಿರುವ ಆರೋಪಿಗಳೇ ಕೃತ್ಯವೆಸಗಿರುವ ಶಂಕೆ

ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆ: ಈಗಾಗಲೇ ಬಂಧಿತರಾಗಿರುವ ಆರೋಪಿಗಳೇ ಕೃತ್ಯವೆಸಗಿರುವ ಶಂಕೆ

- Advertisement -
- Advertisement -

ಉಳ್ಳಾಲ: ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆಯಾಗಿದೆ.  ಆಡಳಿತ ಸಮಿತಿ ಇಂದು ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.

ಕೆಲ ತಿಂಗಳ ಹಿಂದೆ ಉಳ್ಳಾಲ ಭಾಗದಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು ಕೆಲ ದಿನಗಳ ಹಿಂದಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳ ಬಂಧನವಾಗಿತ್ತು. ಕೊರಗಜ್ಜನ ಭಯದಿಂದ ತಪ್ಪು ಕಾಣಿಕೆ ಹಾಕೋದಕ್ಕೆ ಬಂದಾಗ ಆರೋಪಿಗಳನ್ನು ಬಂಧಿಸಲಾಗಿತ್ತು.

ಇನ್ನು ಇದೇ ಆರೋಪಿಗಳು ಬೇರೆ ಕಡೆಯೂ ಇದೇ ರೀತಿ ಮಾಡಿರೋದಾಗಿ ಮೊನ್ನೆ ವಿಚಾರಣೆ ವೇಳೆ ತಿಳಿಸಿದ್ದರು. ಹಾಗಾಗಿ  ಕಾರಣಿಕ ಕ್ಷೇತ್ರ‌ ಕೊಂಡಾಣ ದೈವಸ್ಥಾನದಲ್ಲಿಯು ಇದೇ ಆರೋಪಿಗಳು ದುಷ್ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಅಂತಾ ಹೇಳಲಾಗುತ್ತಿದೆ.

- Advertisement -

Latest News

error: Content is protected !!