Tuesday, April 30, 2024
Homeಕರಾವಳಿಉಪ್ಪಿನಂಗಡಿ: ಪ್ರಧಾನಿ ಮೋದಿ ಹೆಸರು ಹೇಳಿ 16,000 ರೂ ಹಣ ಪಂಗನಾಮ

ಉಪ್ಪಿನಂಗಡಿ: ಪ್ರಧಾನಿ ಮೋದಿ ಹೆಸರು ಹೇಳಿ 16,000 ರೂ ಹಣ ಪಂಗನಾಮ

spot_img
- Advertisement -
- Advertisement -

ಉಪ್ಪಿನಂಗಡಿ : ಪ್ರಧಾನಮಂತ್ರಿಯವರ ಶ್ರಮ ಕಲ್ಯಾಣ್ ಯೋಜನೆಯ ಹಣವನ್ನು ಖಾತೆಗೆ ಹಾಕಲು ವ್ಯಕ್ತಿಯೋರ್ವ ಮೊಬೈಲ್ ಗೆ ಬಂದ ಒಟಿಪಿ ನಂಬರ್ ಕೇಳಿದ್ದು, ಅದನ್ನು ನೀಡಿದ ತಕ್ಷಣ ಒಟಿಪಿ ನಂಬರ್ ನೀಡಿದ ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಸುಮಾರು 16 ಸಾವಿರದಷ್ಟು ಹಣ ಡ್ರಾ ಮಾಡಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಇಂದು ನಡೆದಿದೆ.

ಕಟ್ಟಡ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣಗಾರರ ಸಂಘದ ಪದಾಧಿಕಾರಿಯೂ ಆಗಿರುವ ರಾಮನಗರದ ನಿನ್ನಿಕಲ್ಲ್ ನಿವಾಸಿ ಮುನೀರ್ ದಾವೂದ್ ಅವರ ಮೊಬೈಲ್ ಗೆ ಇಂದು 7866822795 ನಂಬರಿದ ಕರೆಯೊಂದು ಬಂದಿದ್ದು, ಕನ್ನಡದಲ್ಲಿ ಮಾತನಾಡಿದ ಆ ವ್ಯಕ್ತಿ ನಾನು ಇನ್ಶುರೆನ್ಸ್ ಕಂಪೆನಿಯಿಂದ ಮಾತನಾಡುತ್ತಿದ್ದೇನೆ. ನಿಮಗೆ ಪ್ರಧಾನ ಮಂತ್ರಿಯವರ ಶ್ರಮ ಕಲ್ಯಾಣ್ ಯೋಜನೆಯ ಹಣ ಬಿಡುಗಡೆಯಾಗಿದ್ದು, ಅದನ್ನು ನಿಮ್ಮ ಉಳಿತಾಯ ಖಾತೆಗೆ ಹಾಕಬೇಕಾಗಿದೆ. ಆದ್ದರಿಂದ ನಿಮ್ಮ ಮೊಬೈಲ್ ಗೆ ಇದೀಗ ಒಟಿಪಿ ನಂಬರೊಂದು ಬಂದಿದೆ. ಅದನ್ನು ನೀಡುವಂತೆ ತಿಳಿಸಿದ್ದ.
ಈತ ಒಟಿಪಿ ನಂಬರ್ ಬಿಟ್ಟು ಬ್ಯಾಂಕ್ ಅಕೌಂಟ್ ನಂಬರಾಗಲೀ, ಎಟಿಎಂ ನಂಬರಾಗಲಿ ಕೇಳದಿದ್ದಾಗ ಈತ ಮಾತು ನಿಜವೆಂದು ನಂಬಿದ ಇವರು ಆತನಿಗೆ ತನ್ನ ಮೊಬೈಲ್ ಸಂಖ್ಯೆಗೆ ಮೆಸೇಜ್ ನಲ್ಲಿ ಬಂದಿದ್ದ ನಾಲ್ಕು ಅಂಕೆಯ ಒಟಿಪಿ ನಂಬರನ್ನು ನೀಡಿದ್ದರು. ಅದಾದ ಕೆಲವೇ ನಿಮಿಷದಲ್ಲಿ ಬ್ಯಾಂಕ್ ಆಫ್ ಬರೋಡಾದ ಪುತ್ತೂರು ಶಾಖೆಯಲ್ಲಿದ್ದ ಇವರ ಉಳಿತಾಯ ಖಾತೆಯಿಂದ 9,999 ರೂ. ಡ್ರಾ ಆದ ಬಗ್ಗೆ ಮೆಸೇಜ್ ಬಂದಿತ್ತು. ತಕ್ಷವೇ ಇವರು ಗೊಂದಲಕ್ಕೀಡಾಗಿ ಎಟಿಎಂಗೆ ಬಂದು ಪರಿಶೀಲಿಸಿದಾಗ ಇವರ ಉಳಿತಾಯ ಖಾತೆಯಲ್ಲಿದ್ದ 16,000 ರೂ. ನಷ್ಟು ಹಣದಲ್ಲಿ 192 ರೂ. ಮಾತ್ರ ಉಳಿದಿತ್ತು.

ಆಗ ಕರೆ ಮಾಡಿದ ವ್ಯಕ್ತಿಗೆ ವಾಪಸ್ ಕರೆ ಮಾಡಿದಾಗ ಆ ಕಡೆಯಿಂದ ವ್ಯಕ್ತಿಯೋರ್ವ ಕಾಲ್ ರಿಸೀವ್ ಮಾಡಿ ಮಾತನಾಡಿದ್ದು, ನಮ್ಮದು ಇನ್ಶುರೆನ್ಸ್ ಕಂಪೆನಿ ಎಂದು ಸಮರ್ಥಿಸಿನಲ್ಲದೆ, ಮತ್ತಷ್ಟೂ ವಿಚಾರಿಸಿದಾಗ ನಾವು ಹಣ ತೆಗೆದಿಲ್ಲ ಎಂದು ಉಡಾಫೆಯಿಂದ ಮಾತನಾಡಿ ಪೋನ್ ಕಟ್ ಮಾಡಿದ್ದಾನೆ.
ಯಾವುದೇ ಬ್ಯಾಂಕ್ ಅಕೌಂಟ್ ನಂಬರಾಗಲೀ, ಬ್ಯಾಂಕ್ ನ ಮಾಹಿತಿಯಾಗಲೀ, ಎಟಿಎಂನ ಪಿನ್ ನಂಬರ್, ಎಟಿಎಂ ಕಾರ್ಡ್ ನಲ್ಲಿರುವ ಇತರೆ ನಂಬರ್ ಯಾವುದನ್ನೂ ಕೇಳದೇ ಕೇವಲ ಮೊಬೈಲ್ ವೊಂದಕ್ಕೆ ಒಟಿಪಿ ಬಂದ ಒಟಿಪಿ ನಂಬರ್ ಪಡೆದು ಹಣ ಕಬಳಿಸುವ ಜಾಣ ನಡೆ ಇದೀಗ ವಂಚನಾ ಜಾಲ ಅನುಸರಿಸುತ್ತಿದ್ದು, ಬ್ಯಾಂಕ್ ಖಾತೆಯಲ್ಲಿರುವ ನಮ್ಮ ಹಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯುಂಟಾಗಿದೆ.

- Advertisement -
spot_img

Latest News

error: Content is protected !!