ಬಂಟ್ವಾಳ: ಕೇರಳ ಗಡಿಭಾಗದಲ್ಲಿ ಅಕ್ರಮವಾಗಿ ಜನ ನುಸುಳುವಿಕೆಗೆ ಕಡಿವಾಣ ಹಾಕಲು ವಿಟ್ಲ ಎಸ್.ಐ.ವಿನೋದ್ ರೆಡ್ಡಿಯವರಿಂದ ಅವಿರತ ಶ್ರಮವಹಿಸುತ್ತಿದ್ದು. ಇಂದು ಕೂಡಾ ಕಾರ್ಯಚರಣೆ ನಡೆಸಿದ ಎಸ್.ಐ.ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಸಂಪರ್ಕವನ್ನು ಕಡಿತ ಮಾಡಲಾಗಿತ್ತು. ಆದರೆ ವಿಟ್ಲ ಮೂಲಕ ಅನೇಕ ವಾಹನಗಳು ಜಿಲ್ಲೆಗೆ ಅಗಮಿಸುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಗಡಿರಸ್ತೆಗಳನ್ನು ಬಂದ್ ಮಾಡಲಾಗಿತ್ತು.
ಅದರೂ ವಿಟ್ಲದಲ್ಲಿ ಕೇರಳಕ್ಕೆ ಸಂಪರ್ಕ ಮಾಡಲು ಅನೇಕ ಕಳ್ಳ ದಾರಿಗಳಿವೆ. ಇವತ್ತು ಬೆಳಿಗ್ಗೆಯಿಂದ ಕಳ್ಳದಾರಿಯಲ್ಲಿ ಬಾಡಿಗೆ ಪಡೆದು ರಿಕ್ಷಾ ಹಾಗೂ ಬೈಕ್ ಮೂಲಕ ಜನರನ್ನು ಸಾಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂಬ ದೂರು ಪೋಲೀಸರಿಗೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಕಾರ್ಯಚರಣೆ ಆರಂಭಿಸಿದ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಎರಡು ರಿಕ್ಷಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.