- Advertisement -
- Advertisement -
ಬೆಂಗಳೂರು : ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಮಹತ್ವದ ಮುನ್ಸೂಚನೆ ನೀಡಿದ್ದಾರೆ. ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ ಸಂವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತ ಮುಂದಿನ 15 ದಿನಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಅಂತ ಹೇಳಿದರು.
ಈ ನಡುವೆ ಲಾಕ್‌ಡೌನ್ ಮುಗಿಯುವರೆಗೂ SSLC, PUC ಪರೀಕ್ಷೆ ಇಲ್ಲ ಎನ್ನಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡತೊಡಗಿದೆ.ಪರೀಕ್ಷೆ ಬಗ್ಗೆ ಲಾಕ್‌ಡೌನ್ ಮುಗಿದ ಬಳಿಕವೇ ಎಲ್ಲ ಗೊಂದಲಗಳಿಗೆ ಉತ್ತರ ಸಿಗಲಿದ್ದು, ಮಕ್ಕಳಿಗೆ ಕ್ರ್ಯಾಶ್‌ಕೋರ್ಸ್ ನಡೆಸಲು ಕೂಡ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕರೋನಾ ಲಾಕ್‌ಡೌನ್ ಮುಗಿಯದ ಹೊರತು ಯಾವುದು ಸರಿ ಹೋಗೋದಿಲ್ಲ.
- Advertisement -