Saturday, June 6, 2026
Homeಕರಾವಳಿಭಾರತೀಯ ಸೇನಾ ಗಡಿಭದ್ರತಾ ಪಡೆಗೆ ಕಾಣಿಯೂರಿನ ಯೋಗಿತಾ ಆಯ್ಕೆ

ಭಾರತೀಯ ಸೇನಾ ಗಡಿಭದ್ರತಾ ಪಡೆಗೆ ಕಾಣಿಯೂರಿನ ಯೋಗಿತಾ ಆಯ್ಕೆ

- Advertisement -
- Advertisement -

ಕಾಣಿಯೂರು: ಕಾಣಿಯೂರು ಗ್ರಾಮದ ಯುವತಿಯೋರ್ವಳು ಭಾರತೀಯ ಸೇನೆಯ ಗಡಿಭದ್ರತಾ ಪಡೆ(BSF) ಗೆ ಆಯ್ಕೆಯಾಗಿದ್ದಾರೆ. ಮಲೆಕುರ್ಚಿ ಮೇದಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ ಯೋಗಿತಾ ಎಂಬವರು ಬಿಎಸ್‌ಎಫ್ ಗೆ ಆಯ್ಕೆಯಾದವರು. ಇವರು ಎಪ್ರಿಲ್ 01 ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ಎಂಬಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಇವರು ಪ್ರಾಥಮಿಕ ಶಿಕ್ಷಣವನ್ನು ಬೊಬ್ಬೆಕೇರಿ ಹಾಗೂ ಅಲಂಕಾರಿನಲ್ಲಿ ಪಡೆದು, ಬಳಿಕ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ ಪೂರೈಸಿದ್ದಾರೆ. ಬಳಿಕ ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್ಲು ಇಲ್ಲಿ ಪಿಯುಸಿ ಶಿಕ್ಷಣ ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ, ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿರುತ್ತಾರೆ.

- Advertisement -

Latest News

error: Content is protected !!