Friday, June 5, 2026
Homeಕರಾವಳಿಬೆಳ್ತಂಗಡಿ: ತಣ್ಣೀರುಪಂಥದಲ್ಲಿ ಮನೆ ದರೋಡೆಗೆ ವಿಫಲಯತ್ನ, ಹಂಚು ಸರಿಸುವಾಗ ಮುರಿದು ಬಿದ್ದ ಪಕ್ಕಾಸು..!

ಬೆಳ್ತಂಗಡಿ: ತಣ್ಣೀರುಪಂಥದಲ್ಲಿ ಮನೆ ದರೋಡೆಗೆ ವಿಫಲಯತ್ನ, ಹಂಚು ಸರಿಸುವಾಗ ಮುರಿದು ಬಿದ್ದ ಪಕ್ಕಾಸು..!

- Advertisement -
- Advertisement -

ಬೆಳ್ತಂಗಡಿ: ತಣ್ಣೀರುಪಂಥ ಗ್ರಾಮದ ಜನತಾ ಕಾಲೋನಿ ಫಾರೂಕ್ ಗಾರ್ಡನ್ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಮನೆಯಲ್ಲಿ ಗಂಡಸರು ಯಾರೂ ಇಲ್ಲದ ಸಮಯ ನೋಡಿಕೊಂಡು ಕಳ್ಳರು ಮಹಡಿ ಏರಿ ಮನೆಯ ಹಂಚು ಸರಿಸುವ ಯತ್ನ ಮಾಡಿದ್ದಾರೆ. ಕಳ್ಳರು ಹಂಚು ಸರಿಸುವಾಗ ಪಕ್ಕಾಸು ಮುರಿದು ಸದ್ದಾಗಿದೆ.ಮನೆಯಲ್ಲಿ ಮಕ್ಕಳ ಜೊತೆ ಮಲಗಿದ್ದ ಪತ್ನಿಗೆ ಸದ್ದು ಕೇಳಿಸಿ ಎಚ್ಚರವಾಗಿದೆ.

ಮನೆಯ ಯಜಮಾನ ಫಾರೂಕ್ ಅವರು ಮಸೀದಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ರಾತ್ರಿ ಮನೆಯಲ್ಲಿ ಇರಲಿಲ್ಲ. ಪತ್ನಿ ಲೈಟ್ ಹಾಕಿ ಕೂಗಿಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಆದರೆ ಸುತ್ತಮುತ್ತಲಿನ ಕರಾಯ ಕಲ್ಲೇರಿ ಕುಪ್ಪೆಟ್ಟಿ ತುರ್ಕಲಿಕೆ ಮುಂತಾದ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮನೆಗಳ್ಳತನ ನಡೆಯುತ್ತಿದೆ. ದೂರು ನೀಡಿದ್ದರೂ ಕಳ್ಳತನದ ಪ್ರಕರಣಗಳು ನಿಂತಿಲ್ಲ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!