Wednesday, June 3, 2026
Homeತಾಜಾ ಸುದ್ದಿಮದುವೆಯಾಗಿ ಐದೇ ದಿನಕ್ಕೆ ಪತಿಗೆ ಟಾಟಾ ಹೇಳಿದ ಯುವತಿ: ನನಗೆ ಆಕೆಯೇ ಬೇಕು...

ಮದುವೆಯಾಗಿ ಐದೇ ದಿನಕ್ಕೆ ಪತಿಗೆ ಟಾಟಾ ಹೇಳಿದ ಯುವತಿ: ನನಗೆ ಆಕೆಯೇ ಬೇಕು ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ

- Advertisement -
- Advertisement -

ಬಿಹಾರ :  ಮದುವೆಯಾಗಿ 5ನೇ ದಿನಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಓಡಿ ಹೋಗಿರುವ ಬಿಹಾರದ ಪಾಟ್ನಾದ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ. ಇದೀಗ ಪತಿ ನನಗೆ ಆಕಯೇ ಬೇಕು ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ,

ಯುವತಿ ತನ್ನ ಅತ್ತೆಯ ಮಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಿತ್ತು. ಆದರೆ ಇವರಿಬ್ಬರಿಗೆ ವಿವಾಹವಾಗಲು ಬಿಡಬಾರದು ಎಂಬ ಕಾರಣಕ್ಕೆ ಮನೆಯವರು ಬೇರೆ ಹುಡುಗನನ್ನು ನೋಡಿ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಪ್ರೇಮಿಗಳಿಬ್ಬರು ಓಡಿ ಹೋಗಿದ್ದರು.

ಈ ವಿಚಾರವನ್ನು ತಿಳಿದ ಕುಟುಂಬಸ್ಥರು ಇಬ್ಬರ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ನಂತರ ಹುಡುಗಿಗೆ ಈ ಮೊದಲು ನಿಶ್ಚಯವಾದ ಹುಡುಗನೊಂದಿಗೆ ವಿವಾಹವನ್ನು ಮಾಡಿದ್ದಾರೆ. ಆದರೆ ಮದುವೆಯಾಗಿ ಐದೇ ದಿನಕ್ಕೆ ಯುವತಿ ಮತ್ತೆ ತಾನು ಪ್ರೀತಿಸುತ್ತಿದ್ದ ಅತ್ತೆಯ ಮಗನೊಂದಿಗೆ ಓಡಿ ಹೋಗಿದ್ದಾಳೆ.

ಪತ್ನಿಯಿಂದ ದೂರವಾದ ಪತಿ ನನಗೆ ನನ್ನ ಪತ್ನಿ ಬೇಕು ಎಂದು ಪಟ್ಟುಹಿಡಿದಿದ್ದಾನೆ. ಮದುವೆ ಐದೇ ದಿನಕ್ಕೆ ಓಡಿ ಹೋಗಿದ್ದಾಳೆ. ಆಕೆಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ.

- Advertisement -

Latest News

error: Content is protected !!