Saturday, August 29, 2026
Homeಕರಾವಳಿಕಾಸರಗೋಡುಟರೇಸ್ ನಿಂದ ಬೀಳುತ್ತಿದ್ದ ಮಗುನ್ನು ರಕ್ಷಿಸಲು ಹೋದ ಅಮ್ಮಾ: ದುಬೈನಲ್ಲಿ ಮೂರನೇ ಮಹಡಿಯಿಂದ ಬಿದ್ದು ಕೇರಳದ...

ಟರೇಸ್ ನಿಂದ ಬೀಳುತ್ತಿದ್ದ ಮಗುನ್ನು ರಕ್ಷಿಸಲು ಹೋದ ಅಮ್ಮಾ: ದುಬೈನಲ್ಲಿ ಮೂರನೇ ಮಹಡಿಯಿಂದ ಬಿದ್ದು ಕೇರಳದ ಮಹಿಳೆ ಸಾವು

- Advertisement -
- Advertisement -

ಕೇರಳ: ಟೆರೇಸ್ ಮೇಲಿಂದ ಬೀಳುತ್ತಿದ್ದ ತನ್ನ ಆರು ತಿಂಗಳ ಮಗುವನ್ನು ರಕ್ಷಿಸಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಕೇರಳದ ಮಹಿಳೆ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.  

ದುಬೈ ನಲ್ಲಿ ಕೆಲಸ ಮಾಡುತ್ತಿರುವ ಅಬು ಫಜಲ್ ಎಂಬವರ ಪತ್ನಿ ನೀಮಾ ನಿನ್ನೆ ಅಪಾರ್ಟ್ ಮೆಂಟ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ತನ್ನ ಆರು ತಿಂಗಳ ಮಗು ನಿಫಾ ಜೊತೆ ನಿನ್ನೆ ಮಧ್ಯಾಹ್ನ 12 ಗಂಟೆ  ಸುಮಾರಿಗೆ ಆಟವಾಡಲು ಟೆರೇಸ್ ಮೇಲೆ ಹೋಗಿದ್ದಾರೆ. ಈ ವೇಳೆ ಬೀಳುತ್ತಿದ್ದ ಮಗು ರಕ್ಷಿಸಲು ಹೋಗಿ ತಾನೇ ಬಿದ್ದು ಸಾವನ್ನಪ್ಪಿದ್ದಾರೆ.

ನೀಮಾ ಇತ್ತೀಚೆಗೆ ತಮ್ಮ ಮನೆ ಮಾರಾಟ ಮಾಡಿದ್ದರು, ಹೀಗಾಗಿ ತಮ್ಮ ಸಹೋದರಿ ಮನೆಯಲ್ಲಿ ವಾಸವಿದ್ದರು. ಪ್ಯಾರಾಪೆಟ್ ಗೋಡೆಯ ಮೇಲೆ ಹಾಕಿದ್ದ ಗ್ರಿಲ್ ಮೇಲೆ ಮಗು ಬೀಳುವುದನ್ನು ತಪ್ಪಿಸಲು ಹೋಗಿ ನೀಮಾ ಕಟ್ಟಡದಿಂದ ಹಾರಿದ್ದಾರೆ. ಈ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಆದರೆ ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ, ತಲೆಗೆ ಪೆಟ್ಟು ಬಿದ್ದ ಕಾರಣ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡುವ ವೇಳೆಯೇ ಆಕೆ ಸಾವನ್ನಪ್ಪಿದ್ದಾರೆ. ಆಕೆಯ ತಲೆ ಬುರುಡೆಗೆ ಆರು ಕಡೆ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

- Advertisement -

Latest News

error: Content is protected !!