Saturday, June 6, 2026
Homeತಾಜಾ ಸುದ್ದಿತಾಯಿಯಾಗುವ ಖುಷಿಯಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್

ತಾಯಿಯಾಗುವ ಖುಷಿಯಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್

- Advertisement -
- Advertisement -

ಮುಂಬೈ: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸ್ವತಃ ಶ್ರೇಯಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ ಎದು ಅವರು ಬರೆದುಕೊಂಡಿದ್ದಾರೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡಿದ್ದಾರೆ.

2015ರಲ್ಲಿ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಉದ್ಯಮಿ ಶಿಲಾದಿತ್ಯ ಮದುವೆಯಾಗಿದ್ದರು. ಇವರದು ಲವ್ ಕಮ್ ಅರೇಂಜ್ಡ್ ಮದುವೆಯಾಗಿದೆ. ಮದುವೆಗೂ ಮುನ್ನ ಇಬ್ಬರೂ ಸುಮಾರು 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾದ 6 ವರ್ಷಗಳ ನಂತರ ಇಬ್ಬರೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಹಂಚಿದ್ದಾರೆ.

ಶ್ರೇಯಾ ಹಿಂದಿ ಮಾತ್ರವಲ್ಲದೆ, ಕನ್ನಡದಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಮೊಗ್ಗಿನ ಮನಸಲಿ…, ಉಲ್ಲಾಸದ ಹೂಮಳೆ…, ಮಳೆ ಬರುವ ಹಾಗಿದೆ… ಪೋಲಿ ಇವನು.. ಸೇರಿ ಸಾಕಷ್ಟು ಹಾಡುಗಳು ಶ್ರೇಯಾ ಕಂಠದಿಂದ ಮೂಡಿ ಬಂದಿದೆ.

- Advertisement -

Latest News

error: Content is protected !!