Thursday, June 4, 2026
Homeಕರಾವಳಿಕೋಟಿ-ಚೆನ್ನಯ್ಯರಿಗೆ ಹಾಗೂ ಬಿಲ್ಲವರಿಗೆ ಅವಹೇಳನ ಪ್ರಕರಣ: ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ...

ಕೋಟಿ-ಚೆನ್ನಯ್ಯರಿಗೆ ಹಾಗೂ ಬಿಲ್ಲವರಿಗೆ ಅವಹೇಳನ ಪ್ರಕರಣ: ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಜಗದೀಶ್ ಅಧಿಕಾರಿ

- Advertisement -
- Advertisement -

ಪುತ್ತೂರು: ಕೋಟಿ-ಚೆನ್ನಯ್ಯರಿಗೆ ಹಾಗೂ ಬಿಲ್ಲವರಿಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ್ದಾರೆ

ನಾನು ಮಾತನಾಡಿದ್ದು ತಪ್ಪಾಗಿದೆ ಎಂಬುವುದು ನನಗೆ ಅರಿವಾಗಿದೆ. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಕೋಟಿ-ಚೆನ್ನಯ್ಯರ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ್ದಾರೆ.

ಪಡುಮಲೆಯಲ್ಲಿರುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರದಲ್ಲಿ ದೇಯಿ ಬೈದೆತಿ ಅವರ ಸಮಾಧಿ ಸ್ಥಳದಲ್ಲಿ ಕೈ ಕಾಣಿಕೆ ಒಪ್ಪಿಸಿ, ಕುವೆತೋಟದಲ್ಲಿ ಸುವರ್ಣಕೇದಗೆ ದೇಯಿ ಬೈದೆತಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಪಡುಮಲೆಯ ಮೂಲಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕಾರಣಿಕ ಪುರುಷರಾದ ಅವಳಿ ವೀರರು ನನಗೆ ಕ್ಷಮೆ ಕರುಣಿಸಬೇಕು. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಕೇಳಿಕೊಂಡಿದ್ದಾರೆ.

- Advertisement -

Latest News

error: Content is protected !!